Latest Kannada Nation & World
ಐಟಂ ಡಾನ್ಸರ್‌ಗೆ ಕಿಮ್ಮತ್ತಿಲ್ವಾ? ವೇದಿಕೆ ಮೇಲೆಯೇ ಊರ್ವಶಿ ರೌಟೇಲಾಗೆ ಇದೆಂಥ ಅವಮಾನ, ಬಾಲಣ್ಣನ ನಡೆಗೆ ಕಣ್ಣರಳಿಸಿದ ನಟಿ VIDEO

ಕಣ್ಣರಳಿಸಿದ ಊರ್ವಶಿ
ಊರ್ವಶಿ ಅವರನ್ನು ಬಿಟ್ಟು ಇನ್ನಿಬ್ಬರು ನಟಿಯರನ್ನಷ್ಟೇ ಕರೆದು, ಫೋಟೋಗಳಿಗೆ ಬಾಲಕೃಷ್ಣ ಪೋಸ್ ನೀಡಿದ್ದಾರೆ. ಇತ್ತ ಅವರ ಹಿಂದೆಯೇ ನಿಂತಿದ್ದ ಊರ್ವಶಿ ಕಣ್ಣರಳಿಸಿದ್ದಾರೆ. ಮುಖದ ಭಾವನೆಗಳ ಮೂಲಕವೇ ತಮ್ಮೊಳಗಿನ ಅಸಮಾಧಾನವನ್ನು ವೇದಿಕೆ ಮೇಲೆಯೇ ತೋರಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಬಗೆಬಗೆ ಕಾಮೆಂಟ್‌ಗಳು ಸಂದಾಯವಾಗುತ್ತಿವೆ. “ಇದರ ಅರ್ಥ ಏನೆಂದರೆ, ಪ್ರತಿ ಸಲವೂ ಬ್ಯೂಟಿ ವರ್ಕ್ ಆಗಲ್ಲ..”, “ನಾಯಕ ನಟನಿಂದ ಕಡೆಗಣಿಸಲ್ಪಟ್ಟ ಭಾರತದ ಮೊದಲ ನಾಯಕಿ”, “ಇದರಿಂದಲೇ ಬಹುತೇಕ ನಟಿಯರು ಡಿಪ್ರೆಷನ್‌ಗೆ ಹೋಗ್ತಾರೆ” ಎಂಬ ತರಹೇವಾರು ಕಾಮೆಂಟ್ ಸಂದಾಯವಾಗುತ್ತಿವೆ.