Astrology
ಇಂದು ಮಧ್ವಾಚಾರ್ಯರ ಸ್ಮರಣೆಯ ಮಧ್ವ ನವಮಿ; ಮಹತ್ವ ಮತ್ತು ಆಚರಣೆಯ ಬಗ್ಗೆ ತಿಳಿಯಿರಿ

ಮಧ್ವ ನವಮಿ ಆಚರಣೆ
- ಈ ದಿನ ಮುಂಜಾನೆ ಎದ್ದು ಪವಿತ್ರ ಸ್ನಾನ ಮಾಡಬೇಕು
- ನಂತರ ನೈವೇದ್ಯಗಳ ಮೂಲಕ ಮಧ್ವಾಚಾರ್ಯರಿಗೆ ವಿಶೇಷ ಪೂಜೆ
- ಭಗವದ್ಗೀತೆ, ಉಪನಿಷತ್ತುಗಳಂತಹ ಪವಿತ್ರ ಗ್ರಂಥಗಳ ಪಠಣ ಮಾಡಬೇಕು
- ಸತ್ಸಂಗಗಳಲ್ಲೂ ಭಾಗವಹಿಸುವುದು ಒಳ್ಳೆಯದು
- ಅಧ್ಯಾತ್ಮಿಕ ಚರ್ಚೆಗಳು ಮತ್ತು ಚಿಂತನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು
ಶ್ರೀ ಶಂಕರಾಚಾರ್ಯರು, ಶ್ರೀ ರಾಮಾನುಜಾಚಾರ್ಯರಂತೆ ಶ್ರೀ ಮದ್ವಾಚಾರ್ಯರು ಸಹ ನಮ್ಮ ದೇಶ ಕಂಡ ಪ್ರಮುಖ ತತ್ವಜ್ಞಾನಿಗಳಾಗಿದ್ದಾರೆ. ಇವರು ಆಂಜನೇಯ ಸ್ವಾಮಿ ಮತ್ತು ಭೀಮನಂತೆ ವಾಯುದೇವರ 3ನೇ ಅವತಾರವೆಂದು ಧರ್ಮ ಗ್ರಂಥಗಳಿಂದ ತಿಳಿದು ಬರುತ್ತದೆ. ಇವರು ದ್ವೈತವಾದದ ತತ್ತ್ವಶಾಸ್ತ್ರವನ್ನು ಪ್ರತಿಪಾದಿಸುತ್ತಾರೆ. ತಮ್ಮ ಸಾಧನೆಗೆ ತಕ್ಕಂತೆ ಜೀವಿಗಳು ಮೋಕ್ಷ ಪಡೆಯುತ್ತವೆ. ಮೋಕ್ಷ ಪಡೆಯುವ ಅವಕಾಶ ಎಲ್ಲರಿಗೂ ಇದೆ, ಆದರೆ ಮೋಕ್ಷ ಎನ್ನುವುದು ಒಂದೇ ಅಲ್ಲ. ಆ ಜೀವ ಎಲ್ಲಿ ಜನ್ಮ ತಳೆಯುತ್ತದೆ ಎನ್ನುವುದು (ಜಾತಿ, ಧರ್ಮ ಇತ್ಯಾದಿ) ಸಾಧನೆಗೆ ಮುಖ್ಯ ಆಗುವುದಿಲ್ಲ. ಮೋಕ್ಷಕ್ಕೆ ಹಲವು ಜನ್ಮಗಳ ಸಾಧನೆ ಬೇಕಾಗುತ್ತದೆ. ಕರ್ನಾಟಕದಲ್ಲಿ ದಾಸ ಸಾಹಿತ್ಯ ಪ್ರವರ್ಧಮಾನಕ್ಕೆ ಬರಲು ಮಧ್ವಾಚಾರ್ಯರ ಆಧ್ಯಾತ್ಮ ಪ್ರತಿಪಾದನೆಗಳು ಮುಖ್ಯ ಕಾರಣ. ಇದರಿಂದ ನಮ್ಮ ಕರ್ನಾಟಕದಲ್ಲಿ ಭಾಗವತ ಸಂಪ್ರದಾಯವು ಆರಂಭವಾಗುತ್ತದೆ. ಉಡುಪಿಯ ಶ್ರೀ ಕೃಷ್ಣ ಮಠಕ್ಕೂ ಶ್ರೀಮದ್ವಾಚಾರ್ಯರಿಗೂ ಅವಿನಾಭಾವ ಸಂಬಂಧವಿದೆ.