Latest Kannada Nation & World
ಆ ಸಿನಿಮಾ ಬಿಡುಗಡೆಯಾದ ಬಳಿಕ ಮಾದಕ ದ್ರವ್ಯ ಸೇವನೆ ಜಾಸ್ತಿಯಾಗಿದೆ; ಕನ್ನಡದ ಖ್ಯಾತ ನಟನ ಜನಪ್ರಿಯ ಸಿನಿಮಾದ ಕುರಿತು ಜಿ ಪರಮೇಶ್ವರ್ ಹೀಗಂದ್ರು

ಭೀಮ ಸಿನಿಮಾದ ಬಗ್ಗೆ
ದುನಿಯಾ ವಿಜಯ್ ನಟನೆಯ ‘ಭೀಮ’ ಸಿನಿಮಾ 2024ರಲ್ಲಿ ಬಿಡುಗಡೆಯಾಗಿದೆ. ಭೀಮ ಸಿನಿಮಾವು ಬೆಂಗಳೂರಿನ ಸ್ಲಂ ಹುಡುಗರ ಡ್ರಗ್ಸ್ ಅಭ್ಯಾಸದ ಮೇಲೆ ಪ್ರಮುಖವಾಗಿ ಗಮನಹರಿಸಿತ್ತು. ಡ್ರಗ್ಸ್ ಎನ್ನುವುದು ಉಳ್ಳವರ, ಶ್ರೀಮಂತರ, ಕಾಲೇಜು ಹುಡುಗರ ಮೋಜು ಮಸ್ತಿಗೆ ಮಾತ್ರ ಬಳಸಲಾಗುತ್ತದೆ ಎಂದು ಜನಜನಿತವಾಗಿರುವ ಸಂದರ್ಭದಲ್ಲಿ ವಿಜಯ್ ಇದರ ಇನ್ನೊಂದು ಮುಖ ತೋರಿಸಿದ್ದರು. ಬಡ ಹುಡುಗರು ಹೇಗೆ ಮಾದಕ ವಸ್ತುಗಳಿಗೆ ದಾಸರಾಗುತ್ತಿದ್ದಾರೆ? ಹೇಗೆ ಸೈಲೆಂಟ್ ಆಗಿ ಡ್ರಗ್ಸ್ ಜಾಲ ಬೆಳೆಯುತ್ತದೆ? ಡ್ರಗ್ಸ್ ಯಾವೆಲ್ಲ ರೂಪದಲ್ಲಿ ಲಭ್ಯವಿರುತ್ತದೆ? ಡ್ರಗ್ಸ್‌ನಿಂದ ಸಮಾಜದ ಮೇಲೆ ಯಾವೆಲ್ಲ ಪರಿಣಾಮ ಬೀರುತ್ತದೆ? ಮಕ್ಕಳು ಮಾದಕ ವ್ಯಸನಿಗಳಾಗದಂತೆ ನೋಡಿಕೊಳ್ಳಲು ಹೆತ್ತವರ ಪಾತ್ರವೇನು ಇತ್ಯಾದಿ ಅಂಶಗಳ ಮೇಲೆ ಸಾಕಷ್ಟು ಸ್ಟಡಿ ಮಾಡಿ ಈ ಚಿತ್ರವನ್ನು ದುನಿಯಾ ವಿಜಯ್ ಕಟ್ಟಿದ್ದರು.