ಆರ್ಸಿಬಿ ನಾಯಕನಾಗಿ ರಜತ್ ಪಾಟೀದಾರ್ ನೇಮಿಸುವ ಹಿಂದಿದೆ ಮೂರು ಬಲವಾದ ಕಾರಣಗಳು

ರಜತ್ ಪಾಟೀದಾರ್ 2021ರಿಂದ ಆರ್ಸಿಬಿಯ ಅವಿಭಾಜ್ಯ ಅಂಗವಾಗಿದ್ದಾರೆ. 31 ವರ್ಷದ ರಜತ್ ಇದುವರೆಗೂ 27 ಐಪಿಎಲ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಈ ಪೈಕಿ ಬ್ಯಾಟ್ ಬೀಸಿರೋದು 24 ಇನ್ನಿಂಗ್ಸ್ಗಳಲ್ಲಿ. 158.85ರ ಸ್ಟ್ರೈಕ್ರೇಟ್ನಲ್ಲಿ ರನ್ ಗಳಿಸಿರುವ ರಜತ್, 1 ಶತಕ, 7 ಅರ್ಧಶತಕ ಸಹಿತ 799 ರನ್ ಗಳಿಸಿದ್ದಾರೆ. ಅವರ ಬ್ಯಾಟಿಂಗ್ ಸರಾಸರಿ 34.74. ಗರಿಷ್ಠ ಸ್ಕೋರ್ 112. ಅವರು 2021ರಲ್ಲಿ ಆರ್ಸಿಬಿ ಪರ ಐಪಿಎಲ್ಗೆ ಪದಾರ್ಪಣೆ ಮಾಡಿದರು. ಆದಾಗ್ಯೂ, 2022ರ ಹರಾಜಿನಲ್ಲಿ ಮಾರಾಟವಾಗದೆ ಉಳಿದರು. ಟೂರ್ನಿ ಮಧ್ಯೆ ಲವ್ನೀತ್ ಸಿಸೋಡಿಯಾ ಗಾಯಗೊಂಡ ಕಾರಣ ಅವರ ಬದಲಿಗೆ ಆರ್ಸಿಬಿ ಮತ್ತೆ ರಜತ್ ಪಾಟೀದಾರ್ ಮೇಲೆ ನಂಬಿಕೆ ಇಟ್ಟು ಮಣೆ ಹಾಕಿತ್ತು. ಆದರೆ 2023ರಲ್ಲಿ ಇಂಜುರಿ ಕಾರಣ ಟೂರ್ನಿಯಿಂದ ಹೊರಬಿದ್ದಿದ್ದರು. ಬಳಿಕ 2024ರಲ್ಲಿ ಕಂಬ್ಯಾಕ್ ಮಾಡಿದ ಮಧ್ಯ ಪ್ರದೇಶದ ಆಟಗಾರ ಅದ್ಭುತ ಪ್ರದರ್ಶನ ನೀಡಿದ್ದರು. ವಿರಾಟ್ ಕೊಹ್ಲಿ ಮತ್ತು ಯಶ್ ದಯಾಳ್ ಜೊತೆಗೆ 2025ರ ಐಪಿಎಲ್ಗೂ ಮುನ್ನ 11 ಕೋಟಿ ರೂಪಾಯಿಗೆ ರಜತ್ರನ್ನು ಉಳಿಸಿಕೊಳ್ಳಲಾಗಿತ್ತು.