Latest Kannada Nation & World
ಪ್ರೇಮಲೋಕದ ಹಾಡನ್ನು ತಪ್ಪಿಲ್ಲದೆ ಹಾಡಿದ ಎಲ್ಲಿಸ್ ಪೆರಿ; ನೋಡಿ ಕಲಿ ಎಂದು ರಶ್ಮಿಕಾ ಮಂದಣ್ಣಗೆ ನೆಟ್ಟಿಗರು ಫುಲ್ ಕ್ಲಾಸ್

ವಿಡಿಯೋದಲ್ಲಿ ಏನಿದೆ?
ವಿಡಿಯೋ ಆರಂಭದಲ್ಲೇ ಪೆರಿ ಹಾಡಿರುವ ಹಾಡಿನ ಪ್ರೋಮೋ ಹಾಕಲಾಗಿದೆ. ನಂತರ ಕಳೆದ ಬಾರಿ ಶೋ ತಪ್ಪಿಸಿಕೊಂಡಿದ್ರಿ? ಕಳೆದ ವರ್ಷ ಗೆದ್ದ ಟ್ರೋಫಿಯನ್ನು ಎಲ್ಲಿಟ್ಟಿದ್ದೀರಿ ಅಂತ ನ್ಯಾಗ್ಸ್ ಕೇಳಿದ್ದಾರೆ. ಹೀಗೆ ಒಂದಷ್ಟು ಫನ್ನಿ ಪ್ರಶ್ನೆಗಳನ್ನು ಪೆರಿಗೆ ಕೇಳಿದ್ದಾರೆ. ವಿಡಿಯೋದ 3.42ರ ನಿಮಿಷದಲ್ಲಿ ಇಬ್ಬರು ಒಟ್ಟಿಗೆ ಹಾಡು ಹಾಡಿದ್ದಾರೆ. ಅದುವೇ ನಮ್ಮ ಕನ್ನಡದ ಹಾಡು. ಡ್ಯಾನಿಶ್ ಸೇಠ್ ‘ಹೆಲ್ಲೋ ಮೈ ಲವ್ಲಿ ಲೇಡಿ ವು ಆರ್ ಯು, ವು ಆರ್ ಆಯೂ…’ ಎಂದು ಹಾಡುತ್ತಾರೆ. ಬಳಿಕ ಪೆರಿ ಕೂಡ ಒಟ್ಟಿಗೆ ಹಾಡುತ್ತಾರೆ. ನಂತರ ಅವರೇ ಕನ್ನಡ ಬರೋದಿಲ್ವಾ, ಕಣ್ಣೆರಡು ಕಾಣಲ್ವಾ.. ಎಂದು ಅದ್ಭುತವಾಗಿ ಹಾಡುತ್ತಾರೆ. ಯಾವುದೇ ತಪ್ಪಿಲ್ಲದೆ, ಸ್ಪಷ್ಟವಾಗಿ ಮತ್ತು ಸೊಗಸಾಗಿ ಹಾಡಿದ್ದಾರೆ.