Astrology
ಹೋಳಿ ಆಚರಣೆಗೆ ಬಣ್ಣ ಖರೀದಿಸಲು ಹೊರಟಿದ್ದೀರಾ? ಜ್ಯೋತಿಷ್ಯದ ಪ್ರಕಾರ ಯಾವ ರಾಶಿಗೆ ಯಾವ ಬಣ್ಣ ಸೂಕ್ತ ನೋಡಿ

ಹೋಳಿ, ಬಣ್ಣಗಳ ಹಬ್ಬ. ಹೋಳಿ ಹಬ್ಬದ ಬಣ್ಣಗಳು ಸಂತೋಷ, ಸಮೃದ್ಧಿ ತರುತ್ತದೆ ಎಂಬ ನಂಬಿಕೆಯಿದೆ. ಬಣ್ಣಗಳ ಹಬ್ಬ ಹೋಳಿಯ ಸಂದರ್ಭದಲ್ಲಿ ಆಯ್ದುಕೊಳ್ಳುವ ಬಣ್ಣಗಳು ವ್ಯಕ್ತಿಯ ರಾಶಿಯ ಮೇಲೆ ಪ್ರಭಾವ ಬೀರುತ್ತದೆ ಎಂದು ಹೇಳಲಾಗುತ್ತದೆ. ಬಣ್ಣಗಳ ಆಯ್ಕೆಗೂ ಮತ್ತು ಜ್ಯೋತಿಷ್ಯ ಶಾಸ್ತ್ರಕ್ಕೂ ನೇರ ಸಂಬಂಧವಿದೆ ಎಂಬ ನಂಬಿಕೆಯಿದೆ. ಪ್ರತಿಯೊಂದು ರಾಶಿಗೂ ಒಂದು ನಿರ್ದಿಷ್ಟ ಬಣ್ಣವನ್ನು ಸೂಚಿಸಲಾಗಿದೆ. ಅದಕ್ಕೆ ಅನುಗುಣವಾಗಿ ನೀವು ಬಣ್ಣಗಳನ್ನು ಆಯ್ದುಕೊಂಡರೆ ನಿಮಗೆ ಉತ್ತಮ ಫಲಿತಾಂಶ ದೊರಕುತ್ತದೆ. ಹೋಳಿ ಹಬ್ಬದ ಈ ಶುಭ ಸಮಯದಲ್ಲಿ ನಿಮ್ಮ ರಾಶಿಗೆ ಹೊಂದಿಕೆಯಾಗುವ ಬಣ್ಣಗಳನ್ನು ಬಳಸುವುದು ಉತ್ತಮ. ಮೇಷ ರಾಶಿಯಿಂದ ಮೀನ ರಾಶಿಯವರೆಗೆ ಯಾವ ಬಣ್ಣಗಳು ಹೊಂದಿಕೆಯಾಗುತ್ತವೆ ಎಂದು ನೋಡೋಣ.