Latest Kannada Nation & World
ಹಾಲು, ಪೇಪರ್ಗೆಲ್ಲ ಯುಪಿಐ ಪಾವತಿ ರೂಢಿ ಆಯ್ತಲ್ವ; ಈಗ ಯುಪಿಐ ವಹಿವಾಟಿಗೆ ವ್ಯಾಪಾರಿ ಶುಲ್ಕ ವಿಧಿಸಲು ಸರ್ಕಾರದ ಚಿಂತನೆ

UPI RuPay Merchant Charges: ನಿತ್ಯ ಬದುಕಿನಲ್ಲಿ ಹಾಲು, ಪೇಪರ್ ಹೀಗೆ ಸಣ್ಣಪುಟ್ಟ ವಹಿವಾಟಿಗೆಲ್ಲ ಯುಪಿಐ, ರೂಪೇ ಮೂಲಕ ಹಣ ಪಾವತಿಸೋದು ರೂಢಿ ಆಯ್ತು ಅಲ್ವ, ಇನ್ನೇನು, ಯುಪಿಐ, ರೂಪೇ ಪಾವತಿಗೆ ಶುಲ್ಕ ಪಾವತಿಸೋದಕ್ಕೂ ಸಿದ್ಧರಾಗಿ ಎಂದು ಹೇಳಿದೆ ಮಾಧ್ಯಮ ವರದಿ. ಹೌದು, ಯುಪಿಐ ಮತ್ತು ರುಪೇ ಡೆಬಿಟ್ ಕಾರ್ಡ್ ಮೂಲಕ ನಡೆಸುವ ವಹಿವಾಟುಗಳಿಗೆ ಶೀಘ್ರದಲ್ಲೇ ಶುಲ್ಕ ಪಾವತಿಸಬೇಕಾಗಬಹುದು. ಅಂದರೆ, ಯುಪಿಐ ಪಾವತಿ ವಹಿವಾಟು ಉಚಿತವಾಗಿ ಬಳಸುವುದಕ್ಕೆ ಸಾಧ್ಯವಿಲ್ಲ. ಇದಕ್ಕಾಗಿ ನೀವು ಪ್ರತ್ಯೇಕ ಶುಲ್ಕ ಪಾವತಿಸಬೇಕಾಗಬಹುದು ಎಂದು ಮಾಧ್ಯಮ ವರದಿ ಹೇಳಿದೆ. ಇದರಂತೆ, ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಮತ್ತು ರುಪೇ ಡೆಬಿಟ್ ಕಾರ್ಡ್ ಮೂಲಕ ಮಾಡಿದ ವಹಿವಾಟಿನ ಮೇಲೆ ವ್ಯಾಪಾರಿ ಶುಲ್ಕವನ್ನು ಮರಳಿ ವಿಧಿಸುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ. ಒಂದೊಮ್ಮೆ ಇದು ಜಾರಿಯಾದರೆ, ಡಿಜಿಟಲ್ ಪಾವತಿ ದುಬಾರಿಯಾಗಬಹುದು.