Latest Kannada Nation & World
ಪಾಕಿಸ್ತಾನ ರೈಲು ಅಪಹರಣ ಕೇಸ್‌ನ ಇದುವರೆಗಿನ 5 ಮುಖ್ಯ ವಿದ್ಯಮಾನಗಳಿವು

ಪಾಕಿಸ್ತಾನ ರೈಲು ಅಪಹರಣ ಕೇಸ್; 5 ಮುಖ್ಯ ವಿದ್ಯಮಾನಗಳು
ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಗೆ ಸೇರಿದ ಸಶಸ್ತ್ರ ಉಗ್ರರು ಮಂಗಳವಾರ (ಮಾರ್ಚ್ 11) ಪಾಕಿಸ್ತಾನದ ಬೋಲಾನ್ ಕಣಿವೆ ಭಾಗದಲ್ಲಿ ಪರ್ವತ ಪ್ರದೇಶದಲ್ಲಿ ರೈಲಿಗೆ ನುಗ್ಗಿದ್ದು, ಹಲವಾರು ಪ್ರಯಾಣಿಕರನ್ನು ಒತ್ತೆಯಾಳುಗಳಾಗಿ ತೆಗೆದುಕೊಂಡರು. ಅಫ್ಘಾನಿಸ್ತಾನ ಮತ್ತು ಇರಾನ್ ಗಡಿಯಲ್ಲಿರುವ ಬಲೂಚಿಸ್ತಾನ್ ಪ್ರಾಂತ್ಯಕ್ಕೆ ಸ್ವಾತಂತ್ರ್ಯವನ್ನು ಬಯಸುವ ಬಿಎಲ್‌ಎ, 20 ಸೈನಿಕರನ್ನು ಕೊಂದು ಡ್ರೋನ್ ಅನ್ನು ಹೊಡೆದುರುಳಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿತ್ತು. ಅದಾಗಿ, ಪಾಕಿಸ್ತಾನದ ಭದ್ರತಾ ಪಡೆಗಳು ರಕ್ಷಣಾ ಕಾರ್ಯ ನಡೆಸಿ 20ಕ್ಕೂ ಹೆಚ್ಚು ಆತಂಕವಾದಿಗಳ ಹತ್ಯೆ ಮಾಡಿ 150ಕ್ಕೂ ಹೆಚ್ಚು ಪ್ರಯಾಣಿಕರನ್ನು ರಕ್ಷಿಸಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.