Latest Kannada Nation & World
ಭವಿಷ್ಯದ ಆರ್ಥಿಕ ಭದ್ರತೆಯ ಆತಂಕದಲ್ಲಿ ಭಾರತದ ಸ್ಯಾಂಡ್‌ವಿಚ್ ತಲೆಮಾರು; ಅಧ್ಯಯನ ವರದಿ ಹೇಳಿದ್ದಿಷ್ಟು

ಕುಟುಂಬದ ಮೇಲಿನ ಪ್ರೀತಿಯೇ ಈ ತಲೆಮಾರಿನ ಜನರ ಆರ್ಥಿಕ ನಿರ್ಧಾರಗಳನ್ನು ಪ್ರಚೋದಿಸುತ್ತಿರುತ್ತದೆ. ಹೀಗಾಗಿ, ಆರ್ಥಿಕ ಸಮಸ್ಯೆ ಅಥವಾ ಹಣಕಾಸಿನ ಸ್ಥಿತಿಯ ಬಗ್ಗೆ ಅಸಂತೃಪ್ತಿ ಇವರನ್ನು ಕಾಡುತ್ತದೆ ಎಂದು ಈ ಅಧ್ಯಯನ ಕಂಡುಕೊಂಡಿದೆ. ಹಣ ಖಾಲಿಯಾಗುವ ಬಗ್ಗೆ ಚಿಂತೆ, ಉತ್ತಮ ಸಾಧನೆ ಮಾಡುತ್ತಿಲ್ಲ, ತಾವು ಹಿಂದೆ ಬಿದ್ದಿದ್ದೇವೆ ಎಂಬ ಭಾವ ಇವರಲ್ಲಿದೆ. ಇಂತಹ ಭಾವನೆಯನ್ನು ಅಧ್ಯಯನದಲ್ಲಿ ಶೇಕಡ 50ಕ್ಕೂ ಹೆಚ್ಚು ಜನರು ನೀಡಿದ್ದಾರೆ.