Latest Kannada Nation & World
ಭಾರತಕ್ಕೆ ಶೀಘ್ರವೇ ಬರಲಿದ್ದಾರೆ ಗಗನಯಾತ್ರಿ ಸುನೀತಾ ವಿಲಿಯಮ್ಸ್; ಕುಟುಂಬಸ್ಥರ ಖುಷಿಯ ನುಡಿ

ಸುನೀತಾ ವಿಲಿಯಮ್ಸ್ ಅವರು ಅಮೆರಿಕಾದ ನಾಸಾ ತಂಡದ ಭಾಗವಾಗಿ ಬಾಹ್ಯಾಕಾಶ ಯಾನವನ್ನು ಕೈಗೊಂಡಿದ್ದರು. ಎಂಟು ದಿನದ ಯಾತ್ರೆ ಮುಗಿಸಿ ಬರಬೇಕಾಗಿತ್ತಾದರೂ ಒಂಬತ್ತು ತಿಂಗಳ ಕಾಲ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿಯೇ ದಿನ ದೂಡಬೇಕಾಯಿತು. ಏನಾಗುತ್ತದೋ ಎನ್ನುವ ಆತಂಕ ಭಾರತದಲ್ಲಿ ನೆಲೆಸಿರುವ ಅವರ ಕುಟುಂಬದವರೇ ಆಗಿರುವ ನಮಗೆಲ್ಲಾ ಇತ್ತು. ಸುರಕ್ಷಿತವಾಗಿ ಅವರು ಭೂಮಿಗೆ ಮರಳಿರುವ ವಿಚಾರ ತಿಳಿದು, ಅವರು ವಾಪಸಾದ ವಿಡಿಯೋಗಳನ್ನು ನೋಡಿ ಖುಷಿಯಾಯಿತು ಎನ್ನುವುದು ಫಲ್ಗುಣಿ ನುಡಿ.