Latest Kannada Nation & World
ರೈಲಿಗೂ ಬಂತು ಎಟಿಎಂ; ಪಂಚವಟಿ ಎಕ್ಸ್‌ಪ್ರೆಸ್‌ನಲ್ಲಿ ಭಾರತದ ಮೊದಲ ಟ್ರೇನ್ ಎಟಿಎಂ ಸ್ಥಾಪನೆ, ವಿಡಿಯೋ ವೈರಲ್

ಪಂಚವಟಿ ಎಕ್ಸ್‌ಪ್ರೆಸ್‌ನಲ್ಲಿ ಭಾರತದ ಮೊದಲ ಟ್ರೇನ್ ಎಟಿಎಂ ಸ್ಥಾಪನೆ
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಇದರ ವಿಡಿಯೋ ಶೇರ್ ಮಾಡಿದ್ದು, ರೈಲಿನಲ್ಲಿ ಮೊದಲ ಬಾರಿಗೆ ಎಟಿಎಂ ಸ್ಥಾಪನೆ ವಿಚಾರ ಬಹಿರಂಗಪಡಿಸಿದ್ದಾರೆ. ಮೈಕ್ರೋಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಈ ವಿಚಾರ ಹಂಚಿಕೊಂಡಿರುವ ಅವರು, ಪ್ರಯಾಣಿಕರ ಅನುಕೂಲಕ್ಕಾಗಿ ನವೋನ್ವೇಷಣೆ, ಹೊಸ ಹೊಸ ಉಪಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿರುವ ವಿಚಾರ ಹೇಳುತ್ತಿರುತ್ತಾರೆ.