Latest Kannada Nation & World

ಹೇಳುವುದು, ಕೇಳುವುದು ಏನಿಲ್ಲ, ಪಿಎಸ್​ಎಲ್​ಗಿಂತ ಐಪಿಎಲ್​ ನೂರಕ್ಕೆ ನೂರು ಬೆಸ್ಟ್; ಪಾಕ್ ಪತ್ರಕರ್ತನಿಗೆ ಬೆಂಡೆತ್ತಿದ ಸ್ಯಾಮ್ ಬಿಲ್ಲಿಂಗ್ಸ್

Share This Post ????

ಎಸ್‌ಎಲ್ ವಿಶ್ವದಲ್ಲಿ ಅತ್ಯಂತ ಪ್ರಚಾರ ಪಡೆದ ಟಿ20 ಲೀಗ್‌ಗಳಲ್ಲಿ ಒಂದು. ಆದರೆ, ಐಪಿಎಲ್‌ ಗ್ಲಾಮರ್ ಮತ್ತು ಮೋಡಿಗೆ ಪಿಎಸ್ಎಲ್ ಎಂದಿಗೂ ಸರಿ ಸಾಟಿಯಲ್ಲ ಎಂದು ಪಾಕ್ ಪತ್ರಕರ್ತನಿಗೆ ಇಂಗ್ಲೆಂಡ್ ಕ್ರಿಕೆಟಿಗ ಸ್ಯಾಮ್ ಬಿಲ್ಲಿಂಗ್ಸ್ ಬೆಂಡೆತ್ತಿದ್ದಾರೆ.

ಹೇಳುವುದು, ಕೇಳುವುದು ಏನಿಲ್ಲ, ಪಿಎಸ್​ಎಲ್​ಗಿಂತ ಐಪಿಎಲ್​ ನೂರಕ್ಕೆ ನೂರು ಬೆಸ್ಟ್; ಪಾಕ್ ಪತ್ರಕರ್ತನಿಗೆ ಬೆಂಡೆತ್ತಿದ ಸ್ಯಾಮ್ ಬಿಲ್ಲಿಂಗ್ಸ್

ಹೇಳುವುದು, ಕೇಳುವುದು ಏನಿಲ್ಲ, ಪಿಎಸ್​ಎಲ್​ಗಿಂತ ಐಪಿಎಲ್​ ನೂರಕ್ಕೆ ನೂರು ಬೆಸ್ಟ್; ಪಾಕ್ ಪತ್ರಕರ್ತನಿಗೆ ಬೆಂಡೆತ್ತಿದ ಸ್ಯಾಮ್ ಬಿಲ್ಲಿಂಗ್ಸ್ (X)

ಕರಾಚಿ: ಪಾಕಿಸ್ತಾನ ಸೂಪರ್ ಲೀಗ್ (PSL)ನಲ್ಲಿ ಪ್ರಸ್ತುತ ಲಾಹೋರ್ ಖಲಂದರ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಇಂಗ್ಲಿಷ್ ಕ್ರಿಕೆಟಿಗ ಸ್ಯಾಮ್ ಬಿಲ್ಲಿಂಗ್ಸ್ ಅವರು ತಮಗೆ ಕೇಳಿದ ಪ್ರಶ್ನೆಯೊಂದಕ್ಕೆ ಪಾಕ್ ಪತ್ರಕರ್ತರೊಬ್ಬರಿಗೆ ತಬ್ಬಿಬ್ಬಾಗುವಂತೆ ಉತ್ತರಿಸಿದ್ದಾರೆ. ಪಿಎಸ್​ಎಲ್ ಮತ್ತು ಐಪಿಎಲ್ ಈ ಎರಡರಲ್ಲಿ ಯಾವುದು ಉತ್ತಮ ಎನ್ನುವ ಪ್ರಶ್ನೆ ಹಲವು ವರ್ಷಗಳಿಂದಲೂ ಚಾಲ್ತಿಯಲ್ಲಿದೆ. ಅಂದು ಇಂದು ಮುಂದೆಯೂ ನೀಡುವ ಉತ್ತರ ಒಂದೇ, ಅದು ಐಪಿಎಲ್ ಎಂದು. ಕ್ರಿಕೆಟ್​ ಬಗ್ಗೆ ಅಲ್ಪ ಜ್ಞಾನ ಇದ್ದವರೂ ಹೇಳುವ ಉತ್ತರವೂ ಇದೇ ಆಗಿರುತ್ತದೆ. ಹೀಗಿದ್ದರೂ ಪಾಕಿಸ್ತಾನ ಪತ್ರಕರ್ತರು ಪದೆಪದೇ ಇದೇ ಪ್ರಶ್ನೆ ಕೇಳುವ ಮೂಲಕ ಮುಜುಗರಕ್ಕೆ ಒಳಗಾಗುತ್ತಿದ್ದಾರೆ. ಆದರೂ ಅವರು ತಮ್ಮ ಭ್ರಮೆಯಿಂದ ಹೊರಬಂದಿಲ್ಲ.

ಹಾಲಿ-ಮಾಜಿ ಕ್ರಿಕೆಟರ್​​ಗಳೇ ಪಿಎಸ್​ಎಲ್​ಗಿಂತ ಐಪಿಎಲ್ ಬೆಸ್ಟ್​ ಎಂದು ಹೇಳಿದ್ದುಂಟು. ಅಷ್ಟೇ ಯಾಕೆ, ಪಾಕಿಸ್ತಾನ ಸೂಪರ್ ಲೀಗ್​ನಲ್ಲೇ ಆರ್​ಸಿಬಿ ಅಭಿಮಾನಿಗಳು ಕಂಡಿದ್ದೇ ಇದೇ ಉತ್ತಮ ಉದಾಹರಣೆ ಎನ್ನಬಹುದು. ಇದರರ್ಥ ಪಾಕಿಸ್ತಾನದಲ್ಲೂ ಐಪಿಎಲ್​ಗೆ ಅಭಿಮಾನಿಗಳಿದ್ದಾರೆ, ಆದರೆ ಪಿಎಸ್​ಎಲ್​ ಫ್ರಾಂಚೈಸಿಗಳ ಹೆಸರೂ ಭಾರತದವರಿಗೆ ಗೊತ್ತಿಲ್ಲ. ಹೀಗಿದ್ದರೂ ಅದರ ಭ್ರಮೆಯಿಂದ ಪಾಕ್ ಪತ್ರಕರ್ತರು ಹೊರಬಂದಿಲ್ಲ. ಸದ್ಯ ಇದೇ ಪ್ರಶ್ನೆಯನ್ನು ಪತ್ರಕರ್ತರೊಬ್ಬರು ಪಿಎಸ್ಎಲ್​ನಲ್ಲಿ ಆಡುತ್ತಿರುವ ಇಂಗ್ಲೆಂಡ್​ ಕ್ರಿಕೆಟಿಗ ಸ್ಯಾಮ್ ಬಿಲ್ಲಿಂಗ್ಸ್​​ಗೆ ಕೇಳಿದ್ದಾರೆ. ಅದಕ್ಕೆ ಮುಟ್ಟಿನೋಡಿಕೊಳ್ಳುವಂತೆ ಬಿಲ್ಲಿಂಗ್ಸ್ ಉತ್ತರಿಸಿದ್ದಾರೆ. ‘ಪಿಎಸ್‌ಎಲ್ ವಿಶ್ವದಲ್ಲಿ ಅತ್ಯಂತ ಪ್ರಚಾರ ಪಡೆದ ಟಿ20 ಲೀಗ್‌ಗಳಲ್ಲಿ ಒಂದು. ಆದರೆ, ಐಪಿಎಲ್‌ ಗ್ಲಾಮರ್ ಮತ್ತು ಮೋಡಿಗೆ ಪಿಎಸ್ಎಲ್ ಎಂದಿಗೂ ಸರಿ ಸಾಟಿಯಲ್ಲ. ಪಿಎಸ್‌ಎಲ್ ಮಾತ್ರವಲ್ಲ, ವಿಶ್ವದ ಯಾವುದೇ ಟಿ20 ಫ್ರಾಂಚೈಸಿ ಲೀಗ್ ಸಹ ಐಪಿಎಲ್​​ಗೆ ಸಮನಲ್ಲ’ ಎಂದು ಬೆಂಡೆತ್ತಿದ್ದಾರೆ.

ಕೆಣಕಿದವರಿಗೆ ಬೆಂಡೆತ್ತಿದ ಬಿಲ್ಲಿಂಗ್ಸ್

ಇದರ ಬೆನ್ನಲ್ಲೇ ಮತ್ತೆ ಇದೇ ವಿಚಾರ ಕೆದಕಿದರು. ಆಗ ಉತ್ತರಿಸಿದ ಬಿಲ್ಲಿಂಗ್ಸ್, ನಾನು ಏನಾದರೂ ಮೂರ್ಖತನದ ಹೇಳಿಕೆ ನೀಡಬೇಕೆಂದು ಬಯಸುತ್ತಿದ್ದೀರಾ? ಐಪಿಎಲ್ ಮೀರಿಸುವ ಲೀಗ್ ವಿಶ್ವದಲ್ಲಿ ಮತ್ತೊಂದಿಲ್ಲ. ಇದೇ ಸ್ಪಷ್ಟವಾದ ಉತ್ತರ. ಎಲ್ಲಾ ಟಿ20 ಲೀಗ್​​ಗಳು ಇಲ್ಲ. ಇವು ತುಂಬಾ ಹಿಂದೆ ಉಳಿದಿವೆ. ಇಂಗ್ಲೆಂಡ್​ನಲ್ಲಿ ವಿಶ್ವದ ಎರಡನೇ ಅತ್ಯುತ್ತಮ ಲೀಗ್ ರೂಪಿಸಲು ಪ್ಲಾನ್ ಮಾಡುತ್ತಿದೆ. ಆಸ್ಟ್ರೇಲಿಯಾದ ಬಿಗ್​ಬ್ಯಾಷ್​ ಕೂಡ ಇದಕ್ಕಾಗಿಯೇ ಪ್ರಯತ್ನಿಸುತ್ತಿದೆ ಎಂದು ಐಪಿಎಲ್ ಗುಣಮಟ್ಟತೆ ವಿವರಿಸಿದ್ದಾರೆ. ಐಪಿಎಲ್ ಜಾಗತಿಕ ಕ್ರಿಕೆಟ್ ಭೂದೃಶ್ಯದಲ್ಲಿ ತಲುಪುವಿಕೆ, ಹಣಕಾಸು ಪ್ರಮಾಣ ಮತ್ತು ಸ್ಟಾರ್ ಶಕ್ತಿಯ ವಿಷಯದಲ್ಲಿ ಪ್ರಾಬಲ್ಯವನ್ನು ಮುಂದುವರಿಸಿದೆ. ಅವರ ಹೇಳಿಕೆಗಳು ಪಿಎಸ್ಎಲ್ ಅಥವಾ ಇತರ ಲೀಗ್​ಗಳನ್ನು ತಳ್ಳಿಹಾಕದಿದ್ದರೂ ಆಟಗಾರರು ಮತ್ತು ಅಭಿಮಾನಿಗಳಲ್ಲಿ ಐಪಿಎಲ್ ಹೊಂದಿರುವ ಅತ್ಯುನ್ನತ ಸ್ಥಾನಮಾನ ಒತ್ತಿಹೇಳುತ್ತದೆ.

ಆರೋಪ ತಳ್ಳಿ ಹಾಕಿದ್ದ ಡೇವಿಡ್ ವಾರ್ನರ್

2008ರಲ್ಲಿ ಬಿಸಿಸಿಐ ಪ್ರಾರಂಭಿಸಿದ ಐಪಿಎಲ್ ಕ್ರಿಕೆಟ್ ಜಗತ್ತಾಗಿ ವಿಕಸನಗೊಂಡಿದೆ. 10 ನಗರ ಆಧಾರಿತ ಫ್ರಾಂಚೈಸಿಗಳು, ಬೃಹತ್ ಪ್ರಸಾರ ಒಪ್ಪಂದಗಳು ಮತ್ತು ಜಾಗತಿಕ ಅಭಿಮಾನಿಗಳ ಪಾಲ್ಗೊಳ್ಳುವಿಕೆಯೊಂದಿಗೆ, ಲೀಗ್ ಕ್ರಿಕೆಟ್​​ನ ವಾಣಿಜ್ಯ ಭವಿಷ್ಯವನ್ನು ಮರುರೂಪಿಸಿದೆ. ಮಾತ್ರವಲ್ಲದೆ ಅದರ ಮಾದರಿಯನ್ನು ಅನುಕರಿಸಲು ಹಲವಾರು ಇತರ ದೇಶಗಳಿಗೆ ಸ್ಫೂರ್ತಿ ನೀಡಿದೆ. ಐಪಿಎಲ್ ಪ್ರಾರಂಭವಾದ 8 ವರ್ಷಗಳ ನಂತರ ಪಿಎಸ್ಎಲ್​​ನ ಮೊದಲ ಆವೃತ್ತಿ ಬಂದಿತು. ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಐಪಿಎಲ್ ಹರಾಜಿನಲ್ಲಿ ಮಾರಾಟವಾಗದೆ ಉಳಿದಿರುವ ಡೇವಿಡ್ ವಾರ್ನರ್​ ಅವರನ್ನು ಪಿಎಸ್ಎಲ್ ಆಯ್ಕೆ ಮಾಡಿದ್ದಕ್ಕಾಗಿ ಭಾರತದ ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದಾರೆ ಎಂದು ವರದಿಗಾರರೊಬ್ಬರು ಹೇಳಿದಾಗ, ಇದನ್ನು ತಳ್ಳಿ ಹಾಕಿದರು. ನಾನು ಈ ಬಗ್ಗೆ ಕೇಳುತ್ತಿರುವುದು ಇದೇ ಮೊದಲು ಎಂದು ಹೇಳಿದ್ದಾರೆ.

ಇಂಗ್ಲೆಂಡ್ ತಂಡದ ಕ್ರಿಕೆಟಿಗ ಸ್ಯಾಮ್ ಬಿಲ್ಲಿಂಗ್ಸ್ ಮುಲಾಜಿಲ್ಲದೆ ನೇರ ಮಾತುಗಳ ಮೂಲಕ ಉತ್ತರಿಸಿ ಗಮನ ಸೆಳೆದಿದ್ದಾರೆ. 33 ವರ್ಷದ ವಿಕೆಟ್ ಕೀಪರ್ ಬ್ಯಾಟರ್, ಇಂಗ್ಲೆಂಡ್ ತಂಡದ ಪರ 3 ಟೆಸ್ಟ್, 28 ಏಕದಿನ ಮತ್ತು 37 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಐಪಿಎಲ್​​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ಪರ ಒಟ್ಟು 30 ಪಂದ್ಯಗಳಲ್ಲಿ ಆಡಿದ್ದಾರೆ. ಸದ್ಯ ಅವರು 2025ರ ಮೆಗಾ ಹರಾಜಿನಲ್ಲಿ ಅನ್​ಸೋಲ್ಡ್ ಆದ ಕಾರಣ ಪಿಎಸ್​ಎಲ್ ಆಡುತ್ತಿದ್ದಾರೆ.

ಪ್ರಸನ್ನಕುಮಾರ್ ಪಿ.ಎನ್.: ‘ಹಿಂದೂಸ್ತಾನ್ ಟೈಮ್ಸ್​​ ಕನ್ನಡ’ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

Whats_app_banner

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!