Astrology

ಉನ್ನತ ವಿದ್ಯಾಭ್ಯಾಸಕ್ಕೆ ವಿದೇಶ ಪ್ರಯಾಣ, ಮಕ್ಕಳಿಂದ ಶುಭಸುದ್ದಿ, ಹೊಸ ವ್ಯಾಪಾರ ಆರಂಭ ಸಾಧ್ಯತೆ

Share This Post ????

ಜುಲೈ ತಿಂಗಳ ಮಾಸ ಭವಿಷ್ಯ: ಎಲ್ಲಾ ರಾಶಿಚಕ್ರ ಚಿಹ್ನೆಗಳಿಗೆ 2025ರ ಜುಲೈ ತಿಂಗಳ ಭವಿಷ್ಯದಲ್ಲಿ ಉತ್ತಮ ಫಲಗಳಿವೆ. ಕೆಲವು ರಾಶಿಯವರಿಗೆ ಸವಾಲುಗಳಿವೆ. ಧನು, ಮಕರ, ಕುಂಭ, ಮೀನ ರಾಶಿಯವರ ಜುಲೈ ತಿಂಗಳ ಭವಿಷ್ಯ ಇಲ್ಲಿದೆ.

ಜುಲೈ ಮಾಸ ಭವಿಷ್ಯ: ಉನ್ನತ ವಿದ್ಯಾಭ್ಯಾಸಕ್ಕೆ ವಿದೇಶ ಪ್ರಯಾಣ, ಮಕ್ಕಳಿಂದ ಶುಭಸುದ್ದಿ

ಜುಲೈ ಮಾಸ ಭವಿಷ್ಯ: ಉನ್ನತ ವಿದ್ಯಾಭ್ಯಾಸಕ್ಕೆ ವಿದೇಶ ಪ್ರಯಾಣ, ಮಕ್ಕಳಿಂದ ಶುಭಸುದ್ದಿ

ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ‘ದಿನ ಭವಿಷ್ಯ’ ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ನೆರವಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಅವರು ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. ಎಲ್ಲಾ ರಾಶಿಚಕ್ರ ಚಿಹ್ನೆಗಳಿಗೆ 2025ರ ಜುಲೈ ತಿಂಗಳ ಭವಿಷ್ಯದಲ್ಲಿ ಉತ್ತಮ ಫಲಗಳಿವೆ. ಆದರೆ ಕೆಲವೇ ಕೆಲವು ರಾಶಿಯವರಿಗೆ ಸವಾಲುಗಳು ಎದುರಾಗುತ್ತವೆ. ಧನು, ಮಕರ, ಕುಂಭ ಹಾಗೂ ಮೀನ ರಾಶಿಯವರ ಜುಲೈ ತಿಂಗಳ ಭವಿಷ್ಯ ಹೇಗಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ಧನು ರಾಶಿ

ಕ್ರೀಡಾ ಮನೋಭಾವನೆಯ ಕಾರಣ ಮನದಲ್ಲಿ ನೆಮ್ಮದಿ ಇರುತ್ತದೆ. ಹಣಕಾಸಿನ ವಿಚಾರದಲ್ಲಿ ತಪ್ಪು ನಿರ್ಧಾರ ತೆಗೆದುಕೊಳ್ಳುವಿರಿ. ಜೀವನದಲ್ಲಿ ನಿಮಗೆ ಯಾವುದೂ ಅಸಾಧ್ಯವಾಗದು. ವಿದ್ಯಾರ್ಥಿಗಳು ಏಕಾಂಗಿಯಾಗಿ ಸಾಧಿನೆಯತ್ತ ಸಾಗುವರು. ಕಡಿಮೆ ಅವಕಾಶಗಳಿದ್ದರೂ ಉತ್ತಮ ಆತ್ಮವಿಶ್ವಾಸ ಇರುತ್ತದೆ. ಸತತ ಪ್ರಯತ್ನದಿಂದ ನಿಮ್ಮ ಗೆಲುವು ಸಾಧಿಸುವಿರಿ. ಸ್ವಂತ ವ್ಯಾಪಾರ ವ್ಯವಹಾರವನ್ನು ಆರಂಭಿಸುವ ಕನಸು ನನಸಾಗಲಿದೆ. ಜನೋಪಕಾರಿ ಕೆಲಸಗಳನ್ನು ಮಾಡುವಿರಿ. ಉದ್ಯೋಗದಲ್ಲಿ ಉತ್ತಮ ಬದಲಾವಣೆಗಳು ಕಾಣಲಿವೆ. ಆದಾಯಕ್ಕೆ ತಕ್ಕ ಖರ್ಚು ವೆಚ್ಚಗಳಿರುತ್ತವೆ. ಕುಟುಂಬದ ಹಿರಿಯರ ಮನಸ್ಸಂತೋಷಕ್ಕಾಗಿ ನಿಮ್ಮ ಕಾರ್ಯವೈಖರಿ ಬದಲಿಸುವಿರಿ. ಸಣ್ಣ ಪ್ರಮಾಣದ ಕೈಗಾರಿಕೆಯೊಂದನ್ನು ಆರಂಭಿಸುವಿರಿ. ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳಲಿದ್ದಾರೆ. ಸದಾಕಾಲ ಯಾವುದೊಂದು ಚಟುವಟಿಕೆಯಲ್ಲಿ ನಿರತರಾಗಿರುತ್ತಾರೆ. ಅಜೀರ್ಣದ ತೊಂದರೆ ನಿಮ್ಮನ್ನು ಸದಾ ಕಾಡುತ್ತದೆ. ಕುಟುಂಬದ ಸದಸ್ಯರೊಂದಿಗೆ ಕಿರು ಪ್ರವಾಸಕ್ಕೆ ತೆರಳುವಿರಿ.

  • ಪರಿಹಾರ: ಧಾರ್ಮಿಕ ಕೇಂದ್ರಕ್ಕೆ ಅಕ್ಕಿ ಬೆಳೆಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
  • ಅದೃಷ್ಟದ ಸಂಖ್ಯೆ : 1
  • ಅದೃಷ್ಟದ ದಿಕ್ಕು : ಪೂರ್ವ
  • ಅದೃಷ್ಟದ ಬಣ್ಣ: ಹಸಿರು ಬಣ್ಣ

ಮಕರ ರಾಶಿ

ಆತುರದ ಗುಣದಲ್ಲಿ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಒಳ್ಳೆಯ ಮನಸ್ಸಿದ್ದರೂ ದುಡುಕಿನ ಮಾತಿನಿಂದ ಆತ್ಮೀಯರ ನಂಬಿಕೆ ಕಳೆದುಕೊಳ್ಳುವಿರಿ. ಕಷ್ಟವೆನಿಸದ ಕೆಲಸ ಕಾರ್ಯಗಳಲ್ಲಿ ನಿರತರಾಗುವಿರಿ. ದುಡುಕಿನ ಕಾರಣ ಹಣಕಾಸಿನ ವಿವಾದವನ್ನು ಎದುರಿಸಬೇಕಾಗುತ್ತದೆ. ಕುಟುಂಬದಲ್ಲಿ ಭೂ ವಿವಾದವು ಎದುರಾಗುತ್ತದೆ. ಕ್ರಮೇಣವಾಗಿ ಹಣಕಾಸಿನ ಪರಿಸ್ಥಿತಿಯು ಸುಧಾರಿಸುತ್ತದೆ. ಆತಂಕದ ಕ್ಷಣದಲ್ಲಿಯೂ ಬೇರೊಬ್ಬರ ಸಹಾಯವನ್ನು ನಿರೀಕ್ಷಿಸುವುದಿಲ್ಲ. ಉದ್ಯೋಗದಲ್ಲಿ ಬಿಡುವಿಲ್ಲದ ಕೆಲಸವಿರುತ್ತದೆ. ವ್ಯಾಪಾರ ವ್ಯವಹಾರಗಳು ಮಧ್ಯಮ ಗತಿಯಲ್ಲಿ ಸಾಗಲಿವೆ. ಶೀತದ ತೊಂದರೆ ನಿಮ್ಮನ್ನು ಭಾದಿಸುತ್ತದೆ. ತಂದೆಯವರ ಕೆಲಸ ಕಾರ್ಯಗಳಲ್ಲಿ ಸಹಾಯ ಮಾಡುವಿರಿ. ಉದ್ಯೋಗದಲ್ಲಿ ನಿಮ್ಮ ಮಾತಿಗೆ ಮನ್ನಣೆ ದೊರೆಯುತ್ತದೆ. ಮಕ್ಕಳಿಂದ ಶುಭ ವರ್ತಮಾನ ಬರಲಿದೆ. ಸೋದರರ ನಡುವೆ ಹಣಕಾಸಿನ ವಿಚಾರದಲ್ಲಿ ಭಿನ್ನಾಭಿಪ್ರಾಯ ಇರುತ್ತದೆ. ಶಾಂತಿ ಸಹನೆಯಿಂದ ವರ್ತಿಸಿದಲ್ಲಿ ಎದುರಾಗುವ ತೊಂದರೆ ಮರೆಯಾಗುತ್ತದೆ.

  • ಪರಿಹಾರ: ಧಾರ್ಮಿಕ ಕೇಂದ್ರಕ್ಕೆ ಪೂಜಾ ದ್ರವ್ಯಗಳನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
  • ಅದೃಷ್ಟದ ಸಂಖ್ಯೆ : 5
  • ಅದೃಷ್ಟದ ದಿಕ್ಕು : ದಕ್ಷಿಣ
  • ಅದೃಷ್ಟದ ಬಣ್ಣ: ನೀಲಿ ಬಣ್ಣ

ಕುಂಭ ರಾಶಿ

ಮನದಲ್ಲಿಯೇ ನಿಮ್ಮ ಕೆಲಸ ಕಾರ್ಯಗಳನ್ನು ನಿರ್ವಹಿಸುವಿರಿ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆಯಿಂದ ಇರಬೇಕು. ವೃತ್ತಿನಿರತರರಿಗೆ ದೂರದೂರಿಗೆ ವರ್ಗಾವಣೆಯಾಗುತ್ತದೆ. ಉದ್ಯೋಗದಲ್ಲಿನ ಹೊಸತನಕ್ಕೆ ಹೊಂದಿಕೊಳ್ಳಲು ಹೆಚ್ಚಿನ ಸಮಯ ಬೇಕಾಗುತ್ತದೆ. ಸತತ ಪ್ರಯತ್ನದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಗಳಿಸುವಿರಿ. ಆತ್ಮವಿಶ್ವಾಸದಿಂದ ಚುರುಕುತನದಿಂದ ವರ್ತಿಸುವುದು ಒಳ್ಳೆಯದು. ನಿಮ್ಮ ಮನದ ವಿಚಾರವನ್ನು ಬೇರೆಯವರಿಗೆ ತಿಳಿಸುವುದಿಲ್ಲ. ಹೊಂದಾಣಿಕೆಯ ಗುಣದಿಂದ ಮಾತ್ರ ತೊಂದರೆಯಿಂದ ಮುಕ್ತರಾಗಬಹುದು. ಮಾನಸಿಕ ಒತ್ತಡ ಹೆಚ್ಚುವ ಕಾರಣ ಅನಾರೋಗ್ಯದಿಂದ ಬಳಲುವಿರಿ. ಕಮೀಷನ್ ಆಧಾರಿತ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭವಿದೆ. ಕೈ ಕಾಲುಗಳಲ್ಲಿ ನೋವಿನ ಅನುಭವವಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿಯನ್ನು ಅರಿತು ನಡೆಯುತ್ತಾರೆ. ಮಕ್ಕಳಿಗೆ ವಿವಾಹದ ಯೋಗವಿದೆ. ಹೊಸ ವಾಹನವನ್ನು ಕೊಳ್ಳುವ ಸಾಧ್ಯತೆಗಳಿವೆ.

  • ಪರಿಹಾರ: ಹಳದಿ ಬಣ್ಣದ ಬಟ್ಟೆಗಳನ್ನು ದಾನ ನೀಡಿ ದಿನದ ಕೆಲಸಗಳನ್ನು ಆರಂಭಿಸಿರಿ.
  • ಅದೃಷ್ಟದ ಸಂಖ್ಯೆ : 9
  • ಅದೃಷ್ಟದ ದಿಕ್ಕು : ಪಶ್ಚಿಮ
  • ಅದೃಷ್ಟದ ಬಣ್ಣ: ನೇರಳೆ ಬಣ್ಣ

ಮೀನ ರಾಶಿ

ಹೊಸ ಮನೆಯನ್ನು ಕೊಳ್ಳಲು ಹಣದ ಕೊರತೆ ಇರುತ್ತದೆ. ಮನಸ್ಸಿಲ್ಲದಿದ್ದರೂ ಹಣವನ್ನು ಎರವಲು ತರುವಿರಿ. ಸ್ವಂತ ಉದ್ದಿಮೆಯಲ್ಲಿ ಆದಾಯದಲ್ಲಿ ಕೊರತೆ ಇರುತ್ತದೆ. ದೃಡವಾದ ಮನಸ್ಸು ಇರದ ಕಾರಣ ಸಹೋದ್ಯೋಗಿಗಳ ಜೊತೆ ಮನಸ್ತಾಪ ಉಂಟಾಗುತ್ತದೆ. ಉದ್ಯೋಗದಲ್ಲಿ ನಿಮ್ಮ ಪಾಲಿನ ಅವಕಾಶ ಬೇರಯವರ ಪಾಲಾಗುತ್ತದೆ. ಪಾಲುಗಾರಿಕೆಯ ವ್ಯಾಪಾರದಲ್ಲಿ ನಿಮಗೆ ಹೆಚ್ಚಿನ ಲಾಭ ದೊರೆಯುತ್ತದೆ. ಸೇವಾನಿರತರಿಗೆ ಗೌರವ ಪ್ರತಿಷ್ಠೆ ದೊರೆಯುತ್ತದೆ. ಜೀವನದಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ. ಕುಟುಂಬದ ಹಿರಿಯರಿಗೆ ಅನಾರೋಗ್ಯ ವಿರುತ್ತದೆ. ವಿದ್ಯಾರ್ಥಿಗಳು ಸಂಯಮದಿಂದ ಉನ್ನತಿಯತ್ತ ಸಾಗುತ್ತಾರೆ. ಸಮಯ ಸಂದರ್ಭಕ್ಕೆ ಅನುಸಾರವಾಗಿ ವರ್ತಿಸಿದರೆ ನಿರೀಕ್ಷಿತ ಯಶಸ್ಸು ಗಳಿಸಬಹುದು. ಮನೆತನಕ್ಕೆ ಸಂಬಂಧಿಸಿದ ಭೂ ವಿವಾದ ಒಂದು ಎದುರಾಗುತ್ತದೆ. ಹೊಸ ವ್ಯಾಪಾರವನ್ನು ಆರಂಭಿಸುವ ಸಾಧ್ಯತೆ ಇರುತ್ತದೆ.

  • ಪರಿಹಾರ: ಗೋಸೇವೆ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.
  • ಅದೃಷ್ಟದ ಸಂಖ್ಯೆ : 3
  • ಅದೃಷ್ಟದ ದಿಕ್ಕು : ಉತ್ತರ
  • ಅದೃಷ್ಟದ ಬಣ್ಣ: ಗುಲಾಬಿ ಬಣ್ಣ

ಬರಹ: ಎಚ್‌. ಸತೀಶ್, ಜ್ಯೋತಿಷಿ

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ಜಯರಾಜ್‌ ಅಮಿನ್: ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!