ವಿದೇಶದಲ್ಲಿ ಉದ್ಯೋಗಾವಕಾಶ, ಅನಿರೀಕ್ಷಿತ ಧನ ಲಾಭ, ಉದ್ಯೋಗದಲ್ಲಿ ಬಡ್ತಿ

ಜುಲೈ ತಿಂಗಳ ಮಾಸ ಭವಿಷ್ಯ: ಬಹುತೇಕ ಎಲ್ಲಾ ರಾಶಿಚಕ್ರ ಚಿಹ್ನೆಗಳಿಗೆ 2025ರ ಜುಲೈ ತಿಂಗಳ ಭವಿಷ್ಯದಲ್ಲಿ ಉತ್ತಮ ಫಲಗಳಿವೆ. ಕೆಲವು ರಾಶಿಯವರಿಗೆ ಸವಾಲುಗಳಿವೆ. ಮೇಷ, ವೃಷಭ, ಮಿಥುನ, ಕಟಕ ರಾಶಿಯವರ ತಿಂಗಳ ಭವಿಷ್ಯ ಇಲ್ಲಿದೆ.
ಜುಲೈ ಮಾಸ ಭವಿಷ್ಯ: ವಿದೇಶದಲ್ಲಿ ಉದ್ಯೋಗಾವಕಾಶ, ಅನಿರೀಕ್ಷಿತ ಧನ ಲಾಭ, ಉದ್ಯೋಗದಲ್ಲಿ ಬಡ್ತಿ
ಎಷ್ಟೋ ಜನರು ನಿತ್ಯದ ದಿನಚರಿ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ‘ದಿನ ಭವಿಷ್ಯ’ ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಮಾಡಿಕೊಂಡಿರುತ್ತಾರೆ. ಅಂಥವರಿಗೆ ನೆರವಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಅವರು ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. ಎಲ್ಲಾ ರಾಶಿಚಕ್ರ ಚಿಹ್ನೆಗಳಿಗೆ 2025ರ ಜುಲೈ ತಿಂಗಳ ಭವಿಷ್ಯದಲ್ಲಿ ಉತ್ತಮ ಫಲಗಳಿವೆ. ಆದರೆ ಕೆಲವೇ ಕೆಲವು ರಾಶಿಯವರಿಗೆ ಸವಾಲುಗಳು ಎದುರಾಗುತ್ತವೆ. ಮೇಷ, ವೃಷಭ, ಮಿಥುನ ಹಾಗೂ ಕಟಕ ರಾಶಿಯವರಿಗೆ ಜುಲೈ ತಿಂಗಳ ಭವಿಷ್ಯ ಹೇಗಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ಮೇಷ ರಾಶಿ
ಮನಸ್ಸು ಒಳ್ಳೆಯದಾದರೂ ದಂಪತಿಗಳ ನಡುವೆ ಉತ್ತಮ ಬಾಂಧವ್ಯ ಇರುವುದಿಲ್ಲ. ಆರಂಭದ ದಿನಗಳಲ್ಲಿ ಕುಟುಂಬದ ನೆಮ್ಮದಿ ಮತ್ತು ಐಕ್ಯಮತ್ಯದ ಕೊರತೆ ಇರುತ್ತದೆ. ಮನೆತನದ ಭೂಮಿಯ ವಿಚಾರದಲ್ಲಿ ಸೋದರರ ನಡುವೆ ಮನಸ್ತಾಪ ಉಂಟಾಗುತ್ತದೆ. ಹಣಕಾಸಿನ ತೊಂದರೆ ಇರುವುದಿಲ್ಲ. ಆದರೆ ಭಯದ ಕಾರಣ ಮಾನಸಿಕ ಒತ್ತಡವಿರುತ್ತದೆ. ಸ್ವಂತ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ತೋರುವಿರಿ. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ವಿದ್ಯಾರ್ಥಿಗಳು ಆತಂಕ ಬಿಟ್ಟು ವ್ಯಾಸಂಗದಲ್ಲಿ ನಿರತರಾಗುತ್ತಾರೆ. ಉದ್ಯೋಗದಲ್ಲಿ ವಿಶೇಷ ಅನುಕೂಲತೆಗಳು ದೊರೆಯಲಿವೆ. ಸ್ಟಾಕ್ ಮತ್ತು ಷೇರಿನ ವ್ಯವಹಾರದಲ್ಲಿ ಲಾಭವಿದೆ. ನಿರುದ್ಯೋಗಿಗಳು ಅಧಿಕಾರಿಗಳ ಒತ್ತಡಕ್ಕೆ ಮಣಿಯಬೇಕಾಗುತ್ತದೆ. ವಿದೇಶದಲ್ಲಿ ಉದ್ಯೋಗಾವಕಾಶ ಪಡೆಯುತ್ತಾರೆ. ದಿನನಿತ್ಯದ ಖರ್ಚು ವೆಚ್ಚಗಳು ಹೆಚ್ಚುತ್ತವೆ. ಕುಟುಂಬದ ಕೆಲಸದಲ್ಲಿ ಆತ್ಮೀಯರ ಸಹಾಯ ದೊರೆಯುತ್ತದೆ.
- ಪರಿಹಾರ: ಪುಟ್ಟ ಮಕ್ಕಳಿಗೆ ಬೆಣ್ಣೆನೀಡಿ ಕೆಲಸವನ್ನು ಆರಂಬಿಸಿ.
- ಅದೃಷ್ಟದ ಸಂಖ್ಯೆ : 5
- ಅದೃಷ್ಟದ ದಿಕ್ಕು : ಪಶ್ಚಿಮ
- ಅದೃಷ್ಟದ ಬಣ್ಣ: ಆಕಾಶ ನೀಲಿ ಬಣ್ಣ
ವೃಷಭ ರಾಶಿ
ಉದ್ಯೋಗದಲ್ಲಿನ ಕೆಲಸದ ಒತ್ತಡ ಕಡಿಮೆಯಾಗುತ್ತದೆ. ನಿಮ್ಮ ತಪ್ಪು ನಿರ್ಧಾರಗಳಿಂದ ಹಣದ ಕೊರತೆ ಉಂಟಾಗುತ್ತದೆ. ಮಾನಸಿಕ ಸ್ಥೈರ್ಯ ಗಳಿಸಿದಲ್ಲಿ ಯಾವುದೆ ಕೆಲಸ ಕಾರ್ಯಗಳು ಕಷ್ಟ ಎನಿಸುವುದಿಲ್ಲ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಉನ್ನತ ಮಟ್ಟ ತಲುಪಲಿದ್ದಾರೆ. ದೊಡ್ಡದಾದ ಜವಾಬ್ದಾರಿಗಳು ನೆಮ್ಮದಿಯನ್ನು ಹಾಳು ಮಾಡಲಿದೆ. ವೈಯಕ್ತಿಕ ಸಾಧನೆಗೆ ಹೆಚ್ಚಿನ ಗಮನ ನೀಡುವಿರಿ. ಕುಟುಂಬದಲ್ಲಿ ವಿವಾಹಕಾರ್ಯವೊಂದು ನೆರವೇರಲಿದೆ. ಪರಿಚಯ ಅಥವಾ ಸಂಬಂಧದಲ್ಲಿ ಹಣದ ವ್ಯವಹಾರ ಮಾಡುವುದಿಲ್ಲ. ಹಠದ ಸ್ವಭಾವವನ್ನು ಬಿಟ್ಟಲ್ಲಿ ಜೀವನದಲ್ಲಿ ಯಾವುದೆ ತೊಂದರೆ ಕಂಡುಬರುವುದಿಲ್ಲ. ಹೊಸ ವ್ಯಾಪಾರವನ್ನು ಆರಂಭಿಸಲು ಪ್ರಯತ್ನಿಸುವಿರಿ. ಅನಿರೀಕ್ಷಿತ ಧನ ಲಾಭವಿರುತ್ತದೆ. ಸ್ನೇಹಿತರ ಜೊತೆಗೂಡಿ ಕಿರು ಪ್ರವಾಸ ಕೈಗೊಳ್ಳುವಿರಿ. ಬೇರೆಯವರ ಕಷ್ಟ ನಷ್ಟಗಳಿಗೆ ಸ್ಪಂದಿಸುವಿರಿ. ಮನೆಯ ಸುತ್ತ ಮುತ್ತಲಿನ ವಾತಾವರಣವನ್ನು ಶುಭ್ರವಾಗಿ ಇಡುವಿರಿ.
- ಪರಿಹಾರ: ಕಾಲಿನಲ್ಲಿ ಕಪ್ಪು ದಾರವನ್ನು ಧರಿಸುವದರಿಂದ ಶುಭವಿರುತ್ತದೆ.
- ಅದೃಷ್ಟದ ಸಂಖ್ಯೆ : 9
- ಅದೃಷ್ಟದ ದಿಕ್ಕು : ಉತ್ತರ
- ಅದೃಷ್ಟದ ಬಣ್ಣ: ರಕ್ತದ ಬಣ್ಣ
ಮಿಥುನ ರಾಶಿ
ಕಮಿಷನ್ ಆಧಾರಿತ ವ್ಯಾಪಾರ ವ್ಯವಹಾರದಲ್ಲಿ ಲಾಭವಿರುತ್ತದೆ. ಅನಿರೀಕ್ಷಿತ ಧನಲಾಭವಿದೆ. ಮನದಲ್ಲಿ ಧನಾತ್ಮಕ ಚಿಂತನೆಗಳು ಇರುತ್ತವೆ. ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ನಿಧಾನಗತಿಯ ಪ್ರಗತಿ ಕಂಡುಬರುತ್ತದೆ. ಮನೆತನದ ಭೂಮಿಯ ವಿಚಾರದಲ್ಲಿ ನಿಮ್ಮ ಹಿಡಿತ ಹೆಚ್ಚುತ್ತದೆ. ಸ್ಥಿರವಾದ ಆದಾಯ ಇರದೆ ಹೋದರೂ ಹಣಕಾಸಿನ ಕೊರತೆ ಇರದು. ಅನಾವಶ್ಯಕ ಖರ್ಚು ವೆಚ್ಚಗಳು ಹೆಚ್ಚಲಿವೆ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಲಾಭವಿದೆ. ಪಾಲುಗಾರಿಕೆಯ ಉದ್ಯಮದಲ್ಲಿ ಕೊಂಚ ಹಿನ್ನಡೆ ಲಭಿಸಲಿದೆ. ಉದ್ಯೋಗದಲ್ಲಿ ಬಡ್ತಿ ದೊರೆಯುತ್ತದೆ. ಅಂತಾರಾಷ್ಟ್ರೀಯ ಸಂಸ್ಥೆಯ ನಿರ್ವಹಣೆಯ ಜವಾಬ್ದಾರಿ ನಿಮ್ಮದಾಗುತ್ತದೆ. ನಿಮ್ಮ ಮಕ್ಕಳು ಮೇಲಧಿಕಾರಿಗಳಿಂದ ಉತ್ತಮ ಪ್ರಶಂಸೆ ಪಡೆಯುತ್ತಾರೆ. ವಿದ್ಯಾರ್ಥಿಗಳು ಕಲಿಕೆಯಲ್ಲಿ ವಿಶೇಷವಾದ ಸಾಧನೆ ಮಾಡುತ್ತಾರೆ. ಜಗಳ ಕದನಗಳಿಂದ ದೂರ ಉಳಿಯುವಿರಿ. ಪ್ರವಾಸದ ಬಯಕೆಯು ಪೂರ್ಣಗೊಳ್ಳದೆ ಉಳಿಯಲಿದೆ.
- ಪರಿಹಾರ: ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳ ಮನಸ್ಸನ್ನು ನೋಯಿಸದಿರಿ.
- ಅದೃಷ್ಟದ ಸಂಖ್ಯೆ : 2
- ಅದೃಷ್ಟದ ದಿಕ್ಕು : ಪೂರ್ವ
- ಅದೃಷ್ಟದ ಬಣ್ಣ: ಎಲೆಹಸಿರು ಬಣ್ಣ
ಕಟಕ ರಾಶಿ
ಆತುರದಿಂದ ನಿಮ್ಮ ಕೆಲಸ ಕಾರ್ಯದಲ್ಲಿ ಮುಂದುವರೆಯುವಿರಿ. ನಿಮಗೆ ತಿಳಿಯದಂತೆ ಮಾಡುವ ತಪ್ಪಿಗೆ ತೊಂದರೆಗೆ ಒಳಗಾಗುವಿರಿ. ಆಪತ್ತಿನ ಕಾಲದಲ್ಲಿ ಮನಸ್ಸನ್ನು ಬದಲಿಸಿ ಹಾದಿ ಬದಲಿಸುವಿರಿ. ಕುಟುಂಬದ ಕೆಲಸ ಕಾರ್ಯದಲ್ಲಿ ಪರಿಪೂರ್ಣತೆ ದೊರಕದು. ಎಲ್ಲರ ಅವಶ್ಯಕತೆ ಪೂರೈಸಲು ಬೇಕಾದಷ್ಟು ಹಣ ಸಂಪಾದಿಸುವಿರಿ. ಯಾವುದೇ ವಿಚಾರದಲ್ಲಿಯೂ ಅತಿಯಾದ ಆಸೆ ಇರುವುದಿಲ್ಲ. ನಿಮ್ಮ ಮನಸ್ಸನ್ನು ಅರಿತ ಕುಟುಂಬದವರು ಸಹಕಾರ ನೀಡುತ್ತಾರೆ. ಕುಟುಂಬದ ಸದಸ್ಯರ ಜೊತೆಗೂಡಿ ಉದ್ದಿಮೆ ಸ್ಥಾಪಿಸುವ ಯೋಜನೆ ಕಾರ್ಯಗತಗೊಳ್ಳುತ್ತದೆ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಬೆಂಬಲ ಸಂಪಾದಿಸುವಿರಿ. ಹಿರಿಯ ಅಧಿಕಾರಿಗಳಿಗೆ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಸಂಗಾತಿಯ ತಪ್ಪು ನಿರ್ಧಾರದಿಂದ ಆತಂಕದ ಕ್ಷಣವನ್ನು ಎದುರಿಸಬಹುದು. ಕಾದು ನೋಡುವ ತಂತ್ರದ ಕಾರಣ ಅನುಕೂಲತೆಗಳು ಹೆಚ್ಚಲಿವೆ. ಆರೋಗ್ಯದಲ್ಲಿ ಉತ್ತಮ ಚೇತರಿಕೆ ಇರುತ್ತದೆ.
- ಪರಿಹಾರ: ಮಕ್ಕಳಿಗೆ ಗೋಧಿ ಮತ್ತು ಬೆಲ್ಲದಿಂದ ಮಾಡಿದ ಸಿಹಿ ತಿಂಡಿಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
- ಅದೃಷ್ಟದ ಸಂಖ್ಯೆ : 7
- ಅದೃಷ್ಟದ ದಿಕ್ಕು : ದಕ್ಷಿಣ
- ಅದೃಷ್ಟದ ಬಣ್ಣ: ಕೇಸರಿ ಬಣ್ಣ
ಬರಹ: ಎಚ್. ಸತೀಶ್, ಜ್ಯೋತಿಷಿ
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).