ಷೇರು ವ್ಯವಹಾರದಿಂದ ಲಾಭ, ಉನ್ನತ ವಿದ್ಯಾಭ್ಯಾಸದ ಆಸೆ ಕೈಗೂಡಲಿದೆ; ಧನು ರಾಶಿಯಿಂದ ಮೀನದವರೆಗೆ ವಾರ ಭವಿಷ್ಯ

ವಾರ ಭವಿಷ್ಯ: ಪ್ರತಿ ರಾಶಿಗೂ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಗಳನ್ನು ನೀಡುತ್ತವೆ. ಈ ವಾರ ಯಾವ ರಾಶಿಯವರಿಗೆ ಏನು ಫಲ? ಧನು, ಮಕರ, ಕುಂಭ, ಮೀನ ರಾಶಿಯವರ ವಾರ ಭವಿಷ್ಯ ಇಲ್ಲಿದೆ.
ಷೇರು ವ್ಯವಹಾರದಿಂದ ಲಾಭ, ಉನ್ನತ ವಿದ್ಯಾಭ್ಯಾಸದ ಆಸೆ ಕೈಗೂಡಲಿದೆ; ಧನು ರಾಶಿಯಿಂದ ಮೀನದವರೆಗೆ ವಾರ ಭವಿಷ್ಯ
ವಾರ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. 2025ರ ಜೂನ್ 22ರ ಭಾನುವಾರದಿಂದ 28ರ ಶನಿವಾರದವರಿಗೆ ಧನು, ಮಕರ, ಕುಂಭ ಹಾಗೂ ಮೀನ ರಾಶಿಯವರ ವಾರ ಭವಿಷ್ಯ ಇಲ್ಲಿದೆ.
ಧನಸ್ಸು ರಾಶಿ
ನಿಮ್ಮಲ್ಲಿ ಧೈರ್ಯ ಸಾಹಸದ ಗುಣ ಇರುರುತ್ತದೆ. ಮಕ್ಕಳ ವಿಚಾರದಲ್ಲಿ ಮಾನಸಿಕ ಒತ್ತಡವಿರುತ್ತದೆ. ಎದುವಾಗುವ ಕಷ್ಟದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಬುದ್ದಿವಂತಿಗೆಯಿಂದ ವರ್ತಿಸುವಿರಿ. ಕುಟುಂಬದ ವಿಚಾರದಲ್ಲಿ ಸ್ವತಂತ್ರವಾಗಿ ತೀರ್ಮಾನವನ್ನು ಕೈಗೊಳ್ಳುವಿರಿ. ಉದ್ಯೋಗದಲ್ಲಿ ಅನಗತ್ಯ ವಾದ ವಿವಾದಗಳು ಎದುರಾಗುತ್ತದೆ. ಆದರೆ ಅಧಿಕಾರಿಗಳು ನಿಮ್ಮ ಸಹಾಯಕ್ಕೆ ನಿಲ್ಲುತ್ತಾರೆ. ಕೋಪ ತೊರೆದು ಸಂತಸದಿಂದ ಎಲ್ಲರ ಜೊತೆ ವರ್ತಿಸುವಿರಿ. ಮಾನಸಿಕ ಒತ್ತಡದಲ್ಲಿಯೂ ಸಂಯಮದಿಂದ ವರ್ತಿಸುತ್ತಾರೆ. ಸಂಗೀತ ಮತ್ತು ನಾಟ್ಯ ಬಲ್ಲವರು ಅಪರೂಪದ ಅವಕಾಶವನ್ನು ಪಡೆಯುತ್ತಾರೆ. ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಆಸಕ್ತಿ ತೋರುವುದಿಲ್ಲ. ಗಣಿಸಿದ ಹಣವನ್ನು ಸರಿಯಾದ ಕಾರಣಗಳಿಗೆ ವಿನಿಯೋಗಿಸದಿರಿ. ಸೇವಿಸುವ ಆಹಾರದ ಬಗ್ಗೆ ಎಚ್ಚರಿಕೆ ಇರಲಿ. ಸಂತಾನ ಲಾಭವಿದೆ. ಸಮಾಜದ ಕಾರ್ಯದಲ್ಲಿ ತೊಡಗುವಿರಿ. ಷ್ಟಾಕ್ ಮತ್ತು ಷೇರಿನ ವ್ಯವಹಾರದಲ್ಲಿ ಲಾಭ ಗಳಿಸುವಿರಿ.
ಪರಿಹಾರ: ಎಡಗೈಯಲ್ಲಿ ಬೆಳ್ಳಿ ಉಂಗುರವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 10
ಅದೃಷ್ಟದ ದಿಕ್ಕು : ಪೂರ್ವ
ಅದೃಷ್ಟದ ಬಣ್ಣ: ಗುಲಾಬಿ ಬಣ್ಣ
ಮಕರ ರಾಶಿ
ಸದಾಕಾಲ ಕ್ರೀಯಾಶೀಲರಾಗಿ ಜನಮನ ಗೆಲ್ಲುವಿರಿ. ಬಿಡುವಿಲ್ಲದ ದುಡಿಮೆಯಿಂದ ಆರೋಗ್ಯದಲ್ಲಿ ಬದಲಾವಣೆ ಉಂಟಾಗುವ ಸಾಧ್ಯತೆ ಇದೆ. ಕುಟುಂಬದ ಪ್ರಮುಖ ಜವಾಬ್ದಾರಿಯು ನಿಮಗೆ ದೊರೆಯುತ್ತದೆ. ಕೆಲಸದಲ್ಲಿನ ಒತ್ತಡವನ್ನು ಎದುರಿಸಲಾಗದೆ ಉದ್ಯೋಗವನ್ನು ಬದಲಾಯಿಸುವಿರಿ. ವಿದ್ಯಾರ್ಥಿಗಳಲ್ಲಿನ ಆಸೆ ಆಕಾಂಕ್ಷೆಗಳು ಈಡೇರಲಿವೆ. ಉದ್ಯೋಗದಲ್ಲಿ ದೊರೆಯುವ ಅನುಕೂಲತೆಗಳು ಬದುಕಿನ ಹಾದಿಯನ್ನು ಬದಲಿಸುತ್ತದೆ. ಆತ್ಮೀಯರಿಂದ ಉನ್ನತ ವಿದ್ಯಾಭ್ಯಾಸದ ಆಸೆಯು ಕೈಗೂಡಲಿದೆ. ಕುಟುಂಬದ ಸದಸ್ಯರ ಜೊತೆಯಲ್ಲಿ ವಿದೇಶಕ್ಕೆ ಪ್ರಯಾಣ ಬೆಳೆಸುವಿರಿ. ಆರೋಗದಲ್ಲಿ ತೊಂಮ್ದರೆ ಎದುರಾಗುವ ಸಾಧ್ಯತೆ ಇರುತ್ತದೆ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಆಸಕ್ತಿ ಇರುವುದಿಲ್ಲ. ಮನೆತನಕ್ಕೆ ಸಂಬಂಧಿಸಿದ ಹಣಕಾಸಿನ ವಿವಾದ ಕೊನೆಗೊಳ್ಳುತ್ತದೆ. ಬೆಳ್ಳಿ ಮತ್ತು ಚಿನ್ನದ ಒಡವೆಗೆ ಹೆಚ್ಚಿನ ಹಣವನ್ನು ಖರ್ಚುಮಾಡುವಿರಿ. ಸಹನೆಯಿಂದ ವರಿತಿಸದ ಕಾರಣ ಮಕ್ಕಳ ವಿರೋದಕ್ಕೆ ಗುರಿಯಾಗುವಿರಿ. ಅತಿಯಾದ ಮಾತು ಕತೆ ಬೇರೆಯವರ ಬೇಸರಕ್ಕೆ ಕಾರಣವಾಗುತ್ತದೆ.
ಪರಿಹಾರ: ಸಾಧು ಸಂತರ ಆಶೀರ್ವಾದವನ್ನು ಪಡೆದು ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 3
ಅದೃಷ್ಟದ ದಿಕ್ಕು : ದಕ್ಷಿಣ
ಅದೃಷ್ಟದ ಬಣ್ಣ: ಬಿಳಿ ಬಣ್ಣ
ಕುಂಭ ರಾಶಿ
ನಿಮ್ಮ ಮನದ ವಿಚಾರವನ್ನು ಬೇರೆಯವರಿಗೆ ತಿಳಿಸುವುದಿಲ್ಲ. ನಿಮ್ಮಲ್ಲಿರುವ ಅತಿಯಾದ ಆತ್ಮವಿಶ್ವಾಸ ತಪ್ಪು ಹಾದಿಯಲ್ಲಿ ನಡೆಸುತ್ತದೆ. ಅತಿಯಾದ ಕೋಪದಿಂದ ವರ್ತಿಸುವುದು ಒಳ್ಳೆಯದಲ್ಲ. ತಪ್ಪು ನಿರ್ಧಾರದಿಂದ ಹಣಕಾಸಿನ ತೊಂದರೆಗೆ ಸಿಲುಕುವಿರಿ. ಕುಟುಂಬದಲ್ಲಿ ಗಂಭೀರವಾದ ಪರಿಸ್ಥಿತಿಯನ್ನು ಎದುರಿಸಿ ಪರಿಹಾರವನ್ನು ಕಂಡುಹಿಡಿಯುವಿರಿ. ಉದ್ಯೋಗದಲ್ಲಿ ಹೊಸ ಮಾರ್ಪಾಡೊಂದು ಎದುರಾಗಲಿದೆ. ಅವಶ್ಯಕತೆ ಇರುವ ವೇಳೆಯಲ್ಲಿ ಹಣದ ಸಹಾಯ ದೊರೆಯುತ್ತದೆ. ಹೆಚ್ಚಿನ ಅಧ್ಯಯನವು ನಿಮ್ಮ ಮುಂದಿನ ಗುರಿಯಾಗುತ್ತದೆ. ವಿದೇಶಕ್ಕೆ ತೆರಳುವ ಆಸೆ ಸಧ್ಯದ ಪರಿಸ್ಥಿತಿಯಲ್ಲಿ ಈಡೇರದು. ಸಮಾಜದಲ್ಲಿ ನಿಮ್ಮ ಗೌರವವು ಹೆಚ್ಚುತ್ತದೆ. ಉದ್ಯೋಗದಲ್ಲಿ ಅನುಕೂಲಕರ ಬದಲಾವಣೆಗಳು ಕಂಡುಬರುತ್ತವೆ. ವಿದ್ಯಾರ್ಥಿಗಳು ಗುರು ಹಿರಿಯರ ಸಹಾಯ ಪಡೆಯಲಿದ್ದಾರೆ. ಮಹಿಳೆಯರು ಉದ್ಯೋಗದಲ್ಲಿ ಮುಂದೆ ಬರುತ್ತಾರೆ. ಪ್ರಯತ್ನಕ್ಕೆ ತಕ್ಕ ಸಫಲತೆ ಕಾಣುವವರೆಗೂ ವಿಶ್ರಾಂತಿ ಪಡೆಯುವುದಿಲ್ಲ
ಪರಿಹಾರ: ಬೇವಿನ ಮರಕ್ಕೆ ನೀರನ್ನು ಹಾಕಿ ದಿನದ ಕೆಲಸವನ್ನು ಆರಂಭಿಸುವುದು.
ಅದೃಷ್ಟದ ಸಂಖ್ಯೆ : 7
ಅದೃಷ್ಟದ ದಿಕ್ಕು : ಪಶ್ಚಿಮ
ಅದೃಷ್ಟದ ಬಣ್ಣ: ಬೂದು ಬಣ್ಣ
ಮೀನ ರಾಶಿ
ನಿಮ್ಮ ನಿರ್ಧಾರಗಳನ್ನು ಕುಟುಂಬದವರು ವಿರೋಧಿಸುವ ಸಾಧ್ಯತೆ ಕಂಡುಬರುತ್ತದೆ. ಧೈರ್ಯ ಸಾಹಸದಿಂದ ನಿಮ್ಮ ಪ್ರಾಮುಖ್ಯತೆ ಹೆಚ್ಚುತ್ತದೆ. ನಿಮ್ಮ ತಂದೆ ತಾಯಿಯನ್ನು ವಿಶೇಷವಾಗಿ ಗೌರವಿಸುವಿರಿ. ಮನದಲ್ಲಿ ಹಣಕಾಸಿನ ಬಗ್ಗೆ ಯೋಚನೆ ಇರುತ್ತದೆ. ಅನಿರೀಕ್ಷಿತ ಧನ ನಿಮ್ಮದಾಗುತ್ತದೆ. ಸೋಲಿಗೆ ಭಯ ಇಲ್ಲದೆ ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ತೊಡಗುವಿರಿ. ಉದ್ಯೋಗದಲ್ಲಿನ ಕಾನೂನು ಪ್ರಕ್ರಿಯೆಂದರಲ್ಲಿ ಜಯ ಲಭಿಸುತ್ತದೆ. ವಾಹನಾ ಚಾಲನೆಯ ವೇಳೆ ತೊಂದರೆಯಾಗುವ ಸಾಧ್ಯತೆ ಇದೆ ಎಚ್ಚರಿಕೆಯಿಂದ ಇರಿ. ಉದ್ಯೋಗದಲ್ಲಿ ನಿಮ್ಮ ವಿರೋಧಿಗಳ ಮನಗೆಲ್ಲುವಿರಿ. ರಾಜಕೀಯ ವ್ಯಕ್ತಿಗಳಿಗೆ ವಿಶೇಷ ಸ್ಥಾನಮಾನ ದೊರೆಯುತ್ತದೆ. ಕೃಷಿಯಲ್ಲಿ ಆಸಕ್ತಿ ಮೂಡಲಿದೆ. ವಿಕಲಚೇತನರಿಗೆ ಅನುಕೂಲವಾಗುವ ತರಬೇತಿ ಕೇಂದ್ರ ಆರಂಭಿಸುವ ಗುರಿ ಹೊಂದುವಿರಿ. ಕಲುಷಿತ ನೀರಿನ ಸೇವನೆಯಿಂದ ನಿಮ್ಮ ಆರೋಗ್ಯದಲ್ಲಿ ತೊಂದರೆ ಎದುರಾಗುತ್ತದೆ.
ಪರಿಹಾರ: ಮನೆ ಮುಂದಿನ ಒಣಗಿದ ಗಿಡಗಳನ್ನು ವಿಲೇವಾರಿ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 11
ಅದೃಷ್ಟದ ದಿಕ್ಕು : ಉತ್ತರ
ಅದೃಷ್ಟದ ಬಣ್ಣ: ಕಂದು ಬಣ್ಣ
ಬರಹ: ಎಚ್. ಸತೀಶ್, ಜ್ಯೋತಿಷಿ, ಬೆಂಗಳೂರು
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ವಾರ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).