Latest Kannada Nation & World
ಉತ್ತರ ಪ್ರದೇಶದಲ್ಲಿ ತೋಳಗಳ ದಾಳಿಗೆ ಬಾಲಕಿ ಸೇರಿ 9 ಮಂದಿ ಬಲಿ, ಸ್ಥಳೀಯರು ಮಕ್ಕಳ ರಕ್ಷಣೆಗೆ ಮಾಡಿದ್ದೇನು-forest news uttar pradesh bahraich facing wolf attacks 9 dead including 2 year girl localitis protecting with sticks kub ,ರಾಷ್ಟ್ರ-ಜಗತ್ತು ಸುದ್ದಿ
ಲಕ್ನೋ: ಉತ್ತರ ಪ್ರದೇಶದಲ್ಲಿ ಈಗ ತೋಳ ದಾಳಿಯ ಆತಂಕ.ಅದರಲ್ಲೂ ಮನೆಯ ಒಳಗೆ ನುಗ್ಗಿ ಮಕ್ಕಳನ್ನು ಎಳೆದುಕೊಂಡು ಹೋಗಿ ತೋಳಗಳು ಕೊಂದು ಹಾಕುತ್ತಿವೆ. ರಸ್ತೆಗಳಲ್ಲಿ ನಡೆದು ಹೋಗುವವರು, ಜಮೀನಿನ ಕೆಲಸದಲ್ಲಿ ತೊಡಗಿರುವವರ ಮೇಲೂ ದಾಳಿಗಳು ನಡೆದಿವೆ. ಇದರಿಂದ ಈವರೆಗೂ ಒಂಬತ್ತು ಮಂದಿ ಜೀವ ಕಳೆದುಕೊಂಡಿದ್ದಾರೆ. ಎರಡು ವರ್ಷದ ಬಾಲಕಿಯೂ ಇದರಲ್ಲಿ ಸೇರಿದ್ದಾರೆ. ಮೂವತ್ತಕ್ಕೂ ಅಧಿಕ ಮಂದಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ನಿರಂತರ ಮಾನವ ಸಾವಿನ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಅರಣ್ಯ ಇಲಾಖೆಯೂ ತೋಳಗಳ ಬೇಟೆಗೆ ಮುಂದಾಗಿದೆ. ಈಗಾಗಲೇ ನಾಲ್ಕು ತೋಳಗಳನ್ನು ಸೆರೆ ಹಿಡಿದಿದ್ದು. ಇನ್ನೆರಡು ತೋಳ ಸೆರೆಗೆ ಮುಂದಾಗಿದೆ.