Latest Kannada Nation & World
ಜಬಲ್ಪುರ್-ಮುಂಬೈ ಎಕ್ಸ್ಪ್ರೆಸ್ ರೈಲಿನಲ್ಲಿ ಕಾಣಿಸಿಕೊಂಡ ಹಾವು; ಹೌಹಾರಿದ ಪ್ರಯಾಣಿಕರು, ವಿಡಿಯೋ ವೈರಲ್
ಇತ್ತೀಚೆಗೆ ಭಾರತೀಯ ರೈಲ್ವೆ ನಿಲ್ದಾಣಗಳಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಕೆಲ ದಿನಗಳ ಹಿಂದೆಯಷ್ಟೇ ರಿಷಿಕೇಶ ರೈಲ್ವೆ ನಿಲ್ದಾಣದಲ್ಲಿ 6 ಅಡಿ ಉದ್ದದ ಹಾವು ಕಂಡು ಬಂದಿದ್ದು ವಿಡಿಯೋ ವೈರಲ್ ಆಗಿತ್ತು. ಅಲ್ಲದೆ, ಕೆಲವು ತಿಂಗಳ ಹಿಂದೆ, ಗುರುವಾಯೂರ್-ಮದುರೈ ರೈಲಿನಲ್ಲಿ ಇದೇ ರೀತಿಯ ಘಟನೆ ವರದಿಯಾಗಿದೆ. ಚಲಿಸುವ ರೈಲಿನಲ್ಲಿ ಒಬ್ಬ ವ್ಯಕ್ತಿಗೆ ಹಾವು ಕಚ್ಚಿತ್ತು. ಈ ವರ್ಷ ಜುಲೈನಲ್ಲಿ ಗೋರಖ್‌ಪುರ-ಬಾಂದ್ರಾ ಎಕ್ಸ್‌ಪ್ರೆಸ್‌ನಲ್ಲಿ ಹಾವು ಕಾಣಿಸಿಕೊಂಡಿತ್ತು. ಇದು ಪ್ರಯಾಣಿಕರ ಭೀತಿಗೆ ಕಾರಣವಾಗಿದೆ.