Latest Kannada Nation & World
ಭಾರತದಲ್ಲಿ 76000 ರೂ ದಾಟಿ ಹೊಸ ದಾಖಲೆ ಬರೆದ ಬಂಗಾರ; ಚಿನ್ನಕ್ಕೆ ಇನ್ನಷ್ಟು ಹೊಳಪು ನೀಡಿದ 7 ಅಂಶಗಳು

ಬೆಂಗಳೂರು: ಭಾರತದಲ್ಲಿ ಚಿನ್ನದ ಬೆಲೆಯು ಮೊದಲ ಬಾರಿಗೆ 10 ಗ್ರಾಂಗೆ 76,000 ರೂಪಾಯಿಯ ಮಹತ್ವದ ಮೈಲಿಗಲ್ಲನ್ನು ದಾಟಿದೆ. ಬೆಳ್ಳಿ ಕೂಡ ಏರಿಕೆಯ ಹಾದಿಯಲ್ಲಿದ್ದು, ಒಟ್ಟಾರೆ ಚಿನಿವಾರ ಪೇಟೆಯಲ್ಲಿ ಚಿನ್ನ ಬೆಳ್ಳಿ ದರಗಳು ಗಗನಮುಖಿಯಾಗಿ ಹೊಸ ಹೊಸ ದಾಖಲೆ ಬರೆಯುವತ್ತ ಸಾಗಿವೆ. ದೆಹಲಿ, ಜೈಪುರ ಮತ್ತು ಲಕ್ನೋ, ಮುಂಬಯಿ, ಚೆನ್ನೈ, ಬೆಂಗಳೂರು ಮುಂತಾದೆಡೆ ಚಿನ್ನದ ದರ 10 ಗ್ರಾಂಗೆ 76,000 ರೂಪಾಯಿ ದಾಟಿರುವುದಾಗಿ ಗುಡ್ ರಿಟರ್ನ್ಸ್ ಉಲ್ಲೇಖಿಸಿದೆ. ಜಾಗತಿಕ ಆರ್ಥಿಕ ವಿಚಾರಗಳು, ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರ ಕಡಿತ ಮತ್ತು ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆ ಸಾಧನವಾಗಿ ಪರಿಗಣಿಸುತ್ತಿರುವುದು ಇದಕ್ಕೆ ಕಾರಣ.
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ