Latest Kannada Nation & World
ಭಾರತೀಯ ರೈಲ್ವೆ ನೌಕರರಿಗೆ ಗುಡ್ನ್ಯೂಸ್; ದೀಪಾವಳಿಗೆ 28,200 ರೂಪಾಯಿ ಬೋನಸ್?-indian railways good news for railway employees there will be an increase of rs 28200 in bonus on diwali prs ,ರಾಷ್ಟ್ರ-ಜಗತ್ತು ಸುದ್ದಿ

ರೈಲ್ವೆ ನೌಕರರಿಗೆ 78 ದಿನಗಳ ಬೋನಸ್
ರೈಲ್ವೆ ಸರ್ಕಾರದ ಸೂಚನೆಗಳ ಪ್ರಕಾರ, ರೈಲ್ವೇ ನೌಕರರು 78 ದಿನಗಳ ಮೂಲ ವೇತನಕ್ಕೆ ಸಮಾನವಾದ ಪಿಎಲ್ಬಿ ಬೋನಸ್ ಪಡೆಯಬೇಕು ಎಂದು ಹೇಳಿದ್ದಾರೆ. ಆದರೆ, ಪ್ರಸ್ತುತ 7,000 ರೂಪಾಯಿ ಆಧಾರದ ಮೇಲೆ 17,951 ರೂಪಾಯಿಯನ್ನು ಪಡೆಯುತ್ತಿದ್ದಾರೆ. 7ನೇ ವೇತನ ಆಯೋಗದಡಿಯಲ್ಲಿ ರೈಲ್ವೆಯಲ್ಲಿ ಕನಿಷ್ಠ ಮೂಲ ವೇತನ 18,000 ರೂಪಾಯಿ. ಇದರಿಂದ 78 ದಿನಗಳವರೆಗೆ 17,951 ರೂ., ಬೋನಸ್ ತುಂಬಾ ಕಡಿಮೆಯಾಗಿದೆ. ಹಣದುಬ್ಬರ ಏರಿಕೆಯ ನಡುವೆ ಇದು ಸಾಕಷ್ಟು ಆತಂಕ ಹೆಚ್ಚಿಸಿದೆ. 18,000 ಮೂಲ ವೇತನದ ಪ್ರಕಾರ 78 ದಿನಗಳ ಬೋನಸ್ 46,159 ರೂಪಾಯಿ ಆಗುತ್ತದೆ ಎಂದಿದ್ದಾರೆ.