Latest Kannada Nation & World
‘ನಾನೆಲ್ಲೂ ಹೋಗಿಲ್ಲ, ನಮ್ಮ ಕುಟುಂಬದ ಸದ್ಯದ ಪರಿಸ್ಥಿತಿ ನಿಮಗೂ ಗೊತ್ತು’; ರಾಯಲ್ ಚಿತ್ರದ ಹಾಡಿನ ನೆಪದಲ್ಲಿ ಬಂದ ದಿನಕರ್ ತೂಗುದೀಪ

Royal Movie Second Song: ದಿನಕರ್ ತೂಗುದೀಪ ನಿರ್ದೇಶನದ ಜಯಣ್ಣ ಭೋಗೇಂದ್ರ ನಿರ್ಮಾಣದ ರಾಯಲ್ ಸಿನಿಮಾ ಬಿಡುಗಡೆಯ ಸನಿಹ ಬಂದಿದೆ. ಪ್ರಚಾರ ಕೆಲಸ ಆರಂಭಿಸಿದ ಚಿತ್ರತಂಡ, ಎರಡನೇ ಹಾಡನ್ನು ಪ್ರೇಕ್ಷಕರ ಮುಂದಿಟ್ಟಿದೆ. ತುಮಕೂರಿನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಚಿತ್ರತಂಡದ ಬಹುತೇಕರು ಭಾಗವಹಿಸಿ, ಗ್ರ್ಯಾಂಡ್ ಆಗಿಯೇ ಹಾಡನ್ನು ಅನಾವರಣಗೊಳಿಸಿದೆ. ಸಾಂಗ್ ಬಿಡುಗಡೆಗೂ ಮುನ್ನ ಇಡೀ ಚಿತ್ರತಂಡ ತುಮಕೂರು ಸಿದ್ದಗಂಗಾ ಮಠಕ್ಕೆ ತೆರಳಿ ಗೋವಿಗೆ ನಮಸ್ಕರಿಸಿ, ಶ್ರೀಗಳ ಪಾದ ಸ್ಪರ್ಶಿಸಿ ಆಶೀರ್ವಾದ ಪಡೆದಿದೆ.