Latest Kannada Nation & World
ಕಳೆದುಕೊಂಡಲ್ಲೇ ಹುಡುಕಬೇಕು! ಡೀಪ್ ಫೇಕ್ ವಿರುದ್ಧ ಹೋರಾಟಕ್ಕೆ ರಾಯಭಾರಿಯಾದ ನಟಿ ರಶ್ಮಿಕಾ ಮಂದಣ್ಣ

ಈ ಹಿಂದೆ ನಟಿ ರಶ್ಮಿಕಾ ಮಂದಣ್ಣ ಡೀಪ್ ಫೇಕ್ ದಾಳಕ್ಕೆ ಬಲಿಯಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ ಇದೀಗ ಮತ್ತೆ ಡೀಪ್ ಫೇಕ್ ವಿಚಾರದಲ್ಲಿ ನಟಿ ರಶ್ಮಿಕಾ ಮಂದಣ್ಣ ಸುದ್ದಿಯಲ್ಲಿದ್ದಾರೆ. ಗೃಹ ಸಚಿವಾಲಯದ ಅಧೀನದಲ್ಲಿರುವ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರವು ನಟಿ ರಶ್ಮಿಕಾ ಮಂದಣ್ಣ ಅವರನ್ನು ‘ಸೈಬರ್ ಸುರಕ್ಷತೆಯನ್ನು ಉತ್ತೇಜಿಸುವ ರಾಷ್ಟ್ರೀಯ ರಾಯಭಾರಿ’ ಎಂದು ಹೆಸರಿಸಿದೆ. ಮಟ್ಟಹಾಕುವ ಕೆಲಸಕ್ಕೆಂದು ರಚನೆಯಾಗಿರುವ ಈ ಸಮನ್ವಯ ಕೇಂದ್ರದ ರಾಯಭಾರಿಯಾಗಿ ರಶ್ಮಿಕಾ ಮಂದಣ್ಣ ಜವಾಬ್ದಾರಿ ನಿಭಾಯಿಸಲಿದ್ದಾರೆ. ಈ ಪಾತ್ರದಲ್ಲಿ, ಸೈಬರ್ ಬೆದರಿಕೆಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಟಿ ರಶ್ಮಿಕಾ ನಡೆಸಲಿದ್ದಾರೆ. ಜೊತೆಗೆ ಆನ್‌ಲೈನ್ ವಂಚನೆ, ಡೀಪ್‌ಫೇಕ್ ವೀಡಿಯೊಗಳು, ಸೈಬರ್ ಜಗತ್ತಿನಲ್ಲಿ ನಡೆಯುವ ಕಿರುಕುಳ ಮತ್ತು AI-ಚಾಲಿತ ಕೃತಕ ಬುದ್ದಿಮತ್ತೆ ಬಳಸಿ ದುರುದ್ದೇಶಪೂರಿತ ವಿಷಯ ಪ್ರಚಾರದ ವಿರುದ್ಧ ಜಾಗೃತಿ ಮೂಡಿಸಲು ರಶ್ಮಿಕಾ ಮಂದಣ್ಣ ಕೈಜೋಡಿಸಲಿದ್ದಾರೆ.