Latest Kannada Nation & World
ಮೆಕ್ಯಾನಿಕ್ ರಾಕಿ ಟ್ರೈಲರ್ ರಿಲೀಸ್; ನವೆಂಬರ್ 22ರಂದು ತೆರೆಗೆ ಬರ್ತಿದೆ ವಿಶ್ವಕ್ ಸೇನ್ ಅಭಿನಯದ ಸಿನಿಮಾ

ಯಂಗ್ ಹೀರೋ, ಮಾಸ್ ಕಾ ದಾಸ್ ವಿಶ್ವಕ್ ಸೇನ್ ಸದ್ಯ ಸುದ್ದಿಯಲ್ಲಿದ್ದಾರೆ. ಈಗಾಗಲೇ ಈ ವರ್ಷ ವಿಶ್ವಕ್ ಅಭಿನಯದ ಗಾಮಿ ಮತ್ತು ಗ್ಯಾಂಗ್ಸ್ ಆಫ್ ಗೋದಾವರಿ ಸಿನಿಮಾಗಳು ಬಿಡುಗಡೆಯಾಗಿವೆ. ಈ ಎರಡೂ ಚಿತ್ರಗಳು ಉತ್ತಮ ಫಲಿತಾಂಶ ನೀಡಿದೆ. ವಿಶ್ವಕದಿಂದ ಮತ್ತೊಂದು ಸಿನಿಮಾ ಬರುತ್ತಿದೆ. ವಿಶ್ವಕ್ ಸದ್ಯ ‘ಮೆಕ್ಯಾನಿಕ್ ರಾಕಿ’ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾ ರೊಮ್ಯಾಂಟಿಕ್ ಆಕ್ಷನ್ ಡ್ರಾಮಾ ಆಗಿ ಬರುತ್ತಿದೆ. ಈ ಚಿತ್ರದ ಟ್ರೈಲರ್ ಇಂದು (ಅಕ್ಟೋಬರ್ 20) ಬಿಡುಗಡೆಯಾಗಿದೆ.