Latest Kannada Nation & World
ಅಧಿಕೃತವಾಗಿ ಪುಟ್ಟಕ್ಕನ ಮಕ್ಕಳು ಸೀರಿಯಲ್ಗೆ ಸಂಜನಾ ಬುರ್ಲಿ ಗುಡ್ ಬೈ; ಅಭಿಮಾನಿಗಳೊಂದಿಗೆ ಹಂಚಿಕೊಂಡ ಸಂದೇಶ ಇಲ್ಲಿದೆ

ತನ್ನೆಲ್ಲ ಅಭಿಮಾನಿಗಳೊಂದಿಗೆ ಪುಟ್ಟಕ್ಕನ ಮಕ್ಕಳು ಸ್ನೇಹಾ ಪಾತ್ರಧಾರಿ ಸ್ನೇಹಾ, ಸಂಜನಾ ಬುರ್ಲಿ ಅವರು ತಾವು ಧಾರಾವಾಹಿಯಲ್ಲಿ ಇನ್ನು ಮುಂದೆ ಅಭಿನಯಿಸುತ್ತಿಲ್ಲ ಎಂಬ ವಿಷಯವನ್ನು ಹಂಚಿಕೊಂಡಿದ್ದಾರೆ. ಈಗಾಗಲೇ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾ ಪಾತ್ರಕ್ಕೆ ಅಪಘಾತವಾಗಿ ಸಾವನ್ನಪ್ಪಿರುವ ದೃಷ್ಯವನ್ನು ನೀವೆಲ್ಲರೂ ನೋಡಿದ್ದಿರಿ. ಆ ಕಾರಣದಿಂದ ಇನ್ನು ಮುಂದಿನ ದಿನಗಳಲ್ಲಿ ಅವರು ಅಭಿನಯಿಸುತ್ತಿಲ್ಲ. ಈ ಕುರಿತು ಈ ಹಿಂದೆ ಸುದ್ದಿಯಾಗಿತ್ತು. ಇನ್ನು ಮುಂದೆ ಅವರು ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು. ಆದರೆ ಅವರೇ ಈಗ ಅಧಿಕೃತವಾಗಿ ವಿಷಯ ಹಂಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಹಂಚಿಕೊಂಡ ಮಾಹಿತಿಯನ್ನು ನಾವಿಲ್ಲಿ ನೀಡಿದ್ದೇವೆ.