Latest Kannada Nation & World
ಜೀ ಎಂಟರ್ಟೈನರ್ಸ್ ರಿಯಾಲಿಟಿ ಶೋ ಮೂಲಕ ಮನರಂಜಿಸಲು ಬರ್ತಿವೆ ಜೀ ಕನ್ನಡದ 10 ಧಾರಾವಾಹಿ ಬಳಗ

10 ಧಾರಾವಾಹಿಗಳ ಬಳಗ
ಆ ಪ್ರೋಮೋದಲ್ಲಿ ಸೀತಾ ರಾಮ ಸೀರಿಯಲ್, ಲಕ್ಷ್ಮೀ ನಿವಾಸ, ಅಣ್ಣಯ್ಯ, ಶ್ರಾವಣಿ ಸುಬ್ರಮಣ್ಯ, ಪುಟ್ಟಕ್ಕನ ಮಕ್ಕಳು, ಬ್ರಹ್ಮಗಂಟು, ಅಮೃತಧಾರೆ, ಶ್ರೀರಸ್ತು ಶುಭಮಸ್ತು ಸೇರಿ ಒಟ್ಟು 10 ಧಾರಾವಾಹಿಗಳ ಬಳಗ ಈ ಶೋನಲ್ಲಿ ಕಾಣಿಸಿಕೊಳ್ಳಲಿದೆ. ಇದೇ ನವೆಂಬರ್ 2ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ಈ ಶೋ ಪ್ರಸಾರವಾಗಲಿದೆ. ಅದರಂತೆ ಮೊದಲನೇ ಮತ್ತು ಎರಡನೇ ಸಂಚಿಕೆಗಳನ್ನು ಗಮನವಿಟ್ಟು ವೀಕ್ಷಿಸಿ, ಜೀ ಕನ್ನಡ ವಾಹಿನಿ ಕೇಳುವ ಪ್ರಶ್ನೆಗಳಿಗೆ ಉತ್ತರಿಸಿದರೆ, ‘ಜೀ ಎಂಟರ್ಟೈನರ್ಸ್ ಪ್ಲೇ ಅಂಡ್ ವಿನ್’ ಕಾಂಟೆಸ್ಟ್ನ ವಿನ್ನರ್ ನೀವಾಗಬಹುದು. ಜತೆಗೆ 55 ಇಂಚ್ನ LED TVಯನ್ನೂ ಗೆಲ್ಲಬಹುದು.