Latest Kannada Nation & World
ಪತಿ ಸುಕು ಪೂರ್ವಜ್ ನಿರ್ಮಾಣ, ನಿರ್ದೇಶನದಲ್ಲಿ ಜ್ಯೋತಿ ರೈ ನಟನೆ; ಕಿಲ್ಲರ್ ಸಿನಿಮಾ ಫಸ್ಟ್ ಲುಕ್ ರಿಲೀಸ್

ಕಿರುತೆರೆಯಿಂದ ದೂರವಾಗಿ ಸಿನಿಮಾಗಳಲ್ಲಿ ನಟನೆ
ಜ್ಯೋತಿ ಪೂರ್ವಜ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಗುಪ್ಪೆಡಂತ ಮನಸು ಧಾರಾವಾಹಿ ಕಿರುತೆರೆಯಲ್ಲಿ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದೆ. ಈ ಧಾರಾವಾಹಿಯಲ್ಲಿ ಜ್ಯೋತಿ ಜಗತಿ ಪಾತ್ರದಲ್ಲಿ ನಟಿಸಿದ್ದು ಮಗನಿಂದ ದೂರವಾದ ಮತ್ತು ಅವನ ಪ್ರೀತಿಗಾಗಿ ಹಂಬಲಿಸುವ ತಾಯಿಯ ಪಾತ್ರವನ್ನು ನಿರ್ವಹಿಸಿದ್ದರು. ಈ ವರ್ಷ ಆಗಸ್ಟ್ನಲ್ಲಿ ಧಾರಾವಾಹಿ ಮುಗಿದಿತ್ತು. ಅದಕ್ಕೂ ಮುನ್ನ ಜ್ಯೋತಿ ಪೂರ್ವಜ್ ಪಾತ್ರ ಕೊನೆಗೊಂಡಿತ್ತು. ಗುಪ್ಪೆಡಂತ ಮನಸು ಧಾರಾವಾಹಿಗೂ ಮುನ್ನ ಜ್ಯೋತಿ ರೈ ತೆಲುಗಿನಲ್ಲಿ ಕನ್ಯಾದಾನಂ ಧಾರಾವಾಹಿಯಲ್ಲಿ ನಟಿಸಿದ್ದರು. ಕನ್ನಡದಲ್ಲಿ ಸುಮಾರು 15ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಜ್ಯೋತಿ ರೈ ನಟಿಸಿದ್ದಾರೆ. ದಿಯಾ, ಸಪೈಯರ್ ಶಂಕರ್, ನಂಬರ್ 10 ಜೊತೆಗೆ ಕೆಲವೊಂದು ಸಿನಿಮಾಗಳಲ್ಲಿ ಜ್ಯೋತಿ ರೈ ವಿಭಿನ್ನ ಕ್ಯಾರೆಕ್ಟರ್ನಲ್ಲಿ ನಟಿಸಿದ್ದಾರೆ. ಇನ್ಮುಂದೆ ಧಾರಾವಾಹಿಗಳಿಂದ ದೂರ ಉಳಿದು ಸಿನಿಮಾಗಳು, ವೆಬ್ ಸಿರೀಸ್ಗಳ ಕಡೆಗೆ ಹೆಚ್ಚು ಗಮನ ಕೊಡಲು ನಿರ್ಧರಿಸಿದ್ದಾರೆ.