Latest Kannada Nation & World
ಬ್ರಾಹ್ಮಣ ಎಂಬ ಕಾರಣಕ್ಕೆ ಅಮರನ್ ಸಿನಿಮಾದಲ್ಲಿ ಮೇಜರ್ ಮುಕುಂದ್ ವರದರಾಜನ್ ಜಾತಿ ಉಲ್ಲೇಖಿಸಿಲ್ಲವೇ? ಸ್ಪಷ್ಟನೆ ನೀಡಿದ ನಿರ್ದೇಶಕ

“ನನ್ನಲ್ಲಿ ಇಂದು ರೆಬೆಕಾ ವರ್ಗೀಸ್ ಅವರು ಒಂದೇ ಒಂದು ವಿನಂತಿ ಮಾಡಿದ್ರು. ಒಳ್ಳೆಯ ತಮಿಳು ನಟರೊಬ್ಬರು ಮುಕುಂದ್ ಪಾತ್ರ ಮಾಡಬೇಕೆಂದು ಅವರು ಬಯಸಿದರು. ಮುಕುಂದ್ ಅವರು ತಮಿಳಿಯನ್. ಹೀಗಾಗಿ, ಇದನ್ನು ಅವರು ಬಯಸಿದ್ದರು. ಶಿವಕಾರ್ತಿಕೇಯನ್ ಮೂಲ ತಮಿಳು ನಟ. ಇದೇ ಕಾರಣಕ್ಕೆ ಇವನರ್ನು ಆಯ್ಕೆ ಮಾಡಿಕೊಂಡೆ. ಅಚ್ಚಮಿಲೈ ಹಾಡನ್ನು ಇತರೆ ಭಾಷೆಗಳಲ್ಲಿಯೂ ಮೂಲಧಾಟಿಯಲ್ಲೇ ಹಾಡಲಾಗಿದೆ. ಸಿನಿಮಾದಲ್ಲಿ ಶಿವಕಾರ್ತಿಕೇಯನ್ ತನ್ನ ಮಗಳ ಜತೆ ಈ ಹಾಡು ಹಾಡುವ ದೃಶ್ಯವಿದೆ. ಶಿವಕಾರ್ತಿಕೇಯನ್ ಅವರ ಅದ್ಭುತ ನಟನೆ ಈ ಸಿನಿಮಾದ ಯಶಸ್ಸಿಗೆ ಕಾರಣವಾಗಿದೆ” ಎಂದು ನಿರ್ದೇಶಕ ರಾಜ್ ಕುಮಾರ್ ಪೆರಿಯಾಸಾಮಿ ಹೇಳಿದ್ದಾರೆ.