Latest Kannada Nation & World
3 ಸೆಕೆಂಡ್ ವಿಡಿಯೋ ಬಳಸಿದ್ದಕ್ಕೆ 10 ಕೋಟಿಗೆ ಧನುಷ್ ಡಿಮಾಂಡ್; ಪತ್ರದ ಮೂಲಕ ನಟನ ಮುಖಕ್ಕೆ ಹೊಡೆದ ನಯನತಾರಾ
ನಾನುಮ್ ರೌಡಿ ದಾನ್ ಸಿನಿಮಾ 2015ರಲ್ಲಿ ತೆರೆಗೆ ಬಂದಿತ್ತು. ನಯನತಾರಾ ಮತ್ತು ವಿಜಯ್ ಸೇತುಪತಿ ಈ ಸಿನಿಮಾದ ಮುಖ್ಯಭೂಮಿಕೆಯಲ್ಲಿದ್ದರು. ನಯನತಾರಾ ಪತಿ ವಿಘ್ನೇಶ್ ಶಿವನ್ ಈ ಸಿನಿಮಾ ನಿರ್ದೇಶಿಸಿದರೆ, ನಿರ್ಮಾಣದ ಜವಾಬ್ದಾರಿ ಹೊತ್ತಿದ್ದು ನಟ ಧನುಷ್. ಹೀಗಿರುವಾಗಲೇ “ನಯನತಾರಾ: ಬಿಯಾಂಡ್ ದಿ ಫೇರಿ ಟೇಲ್” ಡಾಕ್ಯುಮೆಂಟರಿಯಲ್ಲಿ ಬಳಕೆಯಾದ ದೃಶ್ಯ ತೆಗೆಯುವಂತೆ, ನೇರವಾಗಿ ನಯನತಾರಾಗೆ, 10 ಕೋಟಿ ಪರಿಹಾರದ ಜತೆಗೆ ಲೀಗಲ್ ನೋಟೀಸ್ ಕಳಿಸಿದ್ದರು ಧನುಷ್. ಈ ಸ್ಟಾರ್ ನಡುವಿನ ಈ ಮುಸುಕಿನ ಗುದ್ದಾಟಕ್ಕೆ ಈಗ ತೆರೆಬಿದ್ದಿದೆ. ಈ ಆಟದಿಂದ ನಯನತಾರಾ ಹಿಂದೆ ಸರಿದಿದ್ದಾರೆ. ಆ ದೃಶ್ಯವನ್ನು ತೆಗೆಯುವುದಾಗಿ ಹೇಳಿದ್ದಾರೆ.