Latest Kannada Nation & World
ಚಾರ್ಲಿ ನಟನೆಯ ಲೈನ್‌ಮ್ಯಾನ್ ಸಿನಿಮಾ ಒಟಿಟಿಗೆ ಆಗಮನ, ಯಾವ ಪ್ಲಾಟ್‌ಫಾರ್ಮ್, ಕಥೆಯೇನು? ಇಲ್ಲಿದೆ ವಿವರ

ಲೈನ್‌ಮ್ಯಾನ್ ಸಿನಿಮಾದ ಕಥೆಯೇನು?
ಇದು ಲೈನ್‌ಮ್ಯಾನ್‌ಗಳ ಬದುಕಿನ ಕಥೆಯೂ ಹೌದು. ತೂತುಕುಡಿಯ ಹಳ್ಳಿಯೊಂದರಲ್ಲಿ ಜನರು ಉಪ್ಪಿನಕಾಯಿ ತಯಾರಿಸುವ ಕೆಲಸ ಮಾಡುತ್ತಾರೆ. ಇದು ಇವರ ಜೀವನಾಧಾರ ಕೆಲಸ ಎಂದರೂ ತಪ್ಪಾಗದು. ಅದೇ ಊರಿನಲ್ಲಿ ಎಲೆಕ್ಟ್ರಿಕ್ ಲೈನ್‌ಮ್ಯಾನ್ ಸುಬ್ಬಯ್ಯ (ಚಾರ್ಲಿ) ತನ್ನ ಮಗ ಸೆಂಥಿಲ್‌ನೊಂದಿಗೆ ವಾಸಿಸುತ್ತಾನೆ. ಲೈನ್‌ಮ್ಯಾನ್‌ಗಳ ಜೀವಕ್ಕೆ ಅಪಾಯವಾಗುವುದನ್ನು ಕಡಿಮೆ ಮಾಡಲು ಆತನ ಮಗ ಸೆಂಥಿಲ್ ಸೌರ ವಿದ್ಯುತ್ ದೀಪದ ಐಡಿಯಾ ಮಾಡುತ್ತಾನೆ. ಆದರೆ, ಸೆಂಥಿಲ್ ತನ್ನ ಆವಿಷ್ಕಾರವನ್ನು ಸರ್ಕಾರಿ ಅಧಿಕಾರಿಗಳಿಗೆ ತಿಳಿಸಲು ಪ್ರಯತ್ನಿಸಿದಾಗ ಸಾಕಷ್ಟು ಅಡೆತಡೆ ಎದುರಿಸುತ್ತಾನೆ.