Latest Kannada Nation & World
ಒಟಿಟಿ ಅಖಾಡಕ್ಕೆ ಬರಲು ದಿನಾಂಕ ಘೋಷಣೆ ಮಾಡಿದ ‘ಲಕ್ಕಿ ಭಾಸ್ಕರ್’; ಎಲ್ಲಿ, ಯಾವಾಗಿನಿಂದ ಸ್ಟ್ರೀಮಿಂಗ್?

ಯಾವಾಗ, ಯಾವ ಒಟಿಟಿಯಲ್ಲಿ ವೀಕ್ಷಣೆ?
ಲಕ್ಕಿ ಭಾಸ್ಕರ್ ಚಿತ್ರದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ನೆಟ್ಫ್ಲಿಕ್ಸ್ ಸಂಸ್ಥೆ ದೊಡ್ಡ ಮೊತ್ತಕ್ಕೆ ಪಡೆದುಕೊಂಡಿದೆ. ಇದೀಗ ಇದೇ ಚಿತ್ರದ ಸ್ಟ್ರೀಮಿಂಗ್ ಯಾವಾಗಿನಿಂದ ಎಂಬ ವಿಚಾರವನ್ನೂ ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ಘೋಷಣೆ ಮಾಡಿಕೊಂಡಿದೆ ನೆಟ್ಫ್ಲಿಕ್ಸ್. “ಅದೃಷ್ಟ ಎಂಬುದು ಕೈ ಹಿಡಿದರೆ, ಒಬ್ಬ ಮನುಷ್ಯ ಎಲ್ಲಿಯವರೆಗೂ ಹೋಗಬಹುದು?” ಎಂಬ ಕ್ಯಾಪ್ಷನ್ ನೀಡಿ, ಲಕ್ಕಿ ಭಾಸ್ಕರ್ ಸಿನಿಮಾವನ್ನು ಇದೇ ನವೆಂಬರ್ 28ರಿಂದ ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿಯಲ್ಲಿ ವೀಕ್ಷಿಸಬಹುದು. #LuckyBaskharOnNetflix ಎಂಬ ಹ್ಯಾಷ್ಟ್ಯಾಗ್ ಜತೆಗೆ ಸರ್ಪ್ರೈಸ್ ನೀಡಿದೆ ನೆಟ್ಫ್ಲಿಕ್ಸ್.