Latest Kannada Nation & World
ಈ ವಾರ ಯುಐ ಸಿನಿಮಾ ಬಿಡುಗಡೆ, ರಿಯಲ್ ಸ್ಟಾರ್ ಉಪೇಂದ್ರ ಕುರಿತು 10 ಆಸಕ್ತಿದಾಯಕ ವಿಚಾರಗಳು
UI Movie: ಉಪೇಂದ್ರ ನಟನೆ ಮತ್ತು ನಿರ್ದೇಶನದ ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ “ಯುಐ” ಸಿನಿಮಾ ಈ ವಾರ (ಡಿಸೆಂಬರ್ 20, 2024) ಬಿಡುಗಡೆಯಾಗಲಿದೆ. ಕನ್ನಡದ ಇತರೆ ನಟರು, ನಿರ್ದೇಶಕರ ಸಿನಿಮಾಗಳಿಗಿಂತ ಉಪೇಂದ್ರ ಸಿನಿಮಾಗಳು ಡಿಫರೆಂಟ್ ಆಗಿರುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕನ್ನಡ ಸಿನಿಮಾ ಜಗತ್ತಿಗೆ ಹೊಸತನ, ವಿಭಿನ್ನ, ವಿನೂತನ ಸಿನಿಮಾಗಳನ್ನು ಪರಿಚಯಿಸಿದ ಖ್ಯಾತಿ ಉಪ್ಪಿಯದ್ದು. ಯುಐ ಸಿನಿಮಾ ಬಿಡುಗಡೆ ಸನಿಹದಲ್ಲಿರುವ ಸಂದರ್ಭದಲ್ಲಿ ರಿಯಲ್ ಸ್ಟಾರ್ ಉಪೇಂದ್ರರ ಕುರಿತಾದ ಆಸಕ್ತಿದಾಯಕ ಅಂಶಗಳನ್ನು ತಿಳಿದುಕೊಳ್ಳೋಣ ಬನ್ನಿ.