Latest Kannada Nation & World
ಗಂಟೆಗಟ್ಟಲೆ ಬಂಡೆಗಲ್ಲಿನಂತೆ ನಿಂತು ಸುದೀರ್ಘ ಟೆಸ್ಟ್ ಇನ್ನಿಂಗ್ಸ್ ಆಡಿದ ಆಟಗಾರರಿವರು; 66 ವರ್ಷಗಳಿಂದ ಮುರಿಯಲಾಗದ ದಾಖಲೆ
ಹನೀಫ್ ಮೊಹಮ್ಮದ್
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹನೀಫ್ ಮೊಹಮ್ಮದ್, ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಹೊತ್ತು ಸುದೀರ್ಘ ಇನ್ನಿಂಗ್ಸ್ ಆಡಿದ ದಾಖಲೆ ಹೊಂದಿದ್ದಾರೆ. ಹನೀಫ್ ಮೊಹಮ್ಮದ್ ಒಂದೇ ಇನ್ನಿಂಗ್ಸ್‌ನಲ್ಲಿ ಬರೋಬ್ಬರಿ 970 ನಿಮಿಷಗಳ ಕಾಲ ಆಡಿದ್ದಾರೆ. ಅಂದರೆ ಸುಮಾರು 16 ಗಂಟೆಗಳು. 1958ರ ಜನವರಿಯಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಬಲಿಷ್ಠ ವೆಸ್ಟ್ ಇಂಡೀಸ್ ವಿರುದ್ಧ ಪಾಕಿಸ್ತಾನ ಆಡುತ್ತಿತ್ತು. ಈ ವೇಳೆ ಹನೀಫ್ ಅಪರೂಪದ ಸಾಧನೆ ಮಾಡಿದರು. ಆಗ ವಿಂಡೀಸ್ ಅತ್ಯಂತ ಬಲಿಷ್ಠ ತಂಡವಾಗಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ವೆಸ್ಟ್ ಇಂಡೀಸ್ 579 ರನ್ ಗಳಿಸಿದರೆ, ಪಾಕಿಸ್ತಾನ 106 ರನ್‌ಗಳಿಗೆ ಆಲೌಟ್ ಆಯ್ತು. ಪಾಕಿಸ್ತಾನ ಫಾಲೊ-ಆನ್ ಎದುರಿಸಿ ಎರಡನೇ ಇನ್ನಿಂಗ್ಸ್ ಆಡಿತು. ಆರಂಭಿಕ ಬ್ಯಾಟರ್ ಆಗಿ ಬಂದ ಹನೀಫ್, ಇತಿಹಾಸ ನಿರ್ಮಿಸಿದರು.