Latest Kannada Nation & World
ಅಡುಗೆ ಮನೆಯಲ್ಲಿ ಚೆಲ್ವಿ ಅವಾಂತರ ಕಂಡು ಸಿಟ್ಟಾದ ಜಯಂತ್, ಗಂಡನಿಗೆ ಸಮಾಧಾನ ಹೇಳಿದ ಜಾಹ್ನವಿ; ಲಕ್ಷ್ಮೀ ನಿವಾಸ ಧಾರಾವಾಹಿ
ಅಜ್ಜಿ, ಚೆಲ್ವಿ, ವೆಂಕಿಯನ್ನು ನೋಡಿ ಶಾಕ್ ಆದ ಜಯಂತ್
ಅಜ್ಜಿ, ವೆಂಕಿ ಅಣ್ಣ, ಚೆಲ್ವಿ ಅತ್ತಿಗೆಯನ್ನು ನೋಡಿ ಜಾನು ಬಹಳ ಖುಷಿಯಾಗುತ್ತಾಳೆ. ಬಹಳ ದಿನಗಳ ನಂತರ ತವರು ಮನೆಯವನ್ನು ನೋಡಿ ಜಾನು ಸಂತೋಷ ಪಡುತ್ತಾಳೆ. ಮೂವರನ್ನೂ ಸಡಗರದಿಂದ ಬರಮಾಡಿಕೊಂಡು ಎಲ್ಲರ ಯೋಗಕ್ಷೇಮ ವಿಚಾರಿಸುತ್ತಾಳೆ. ಜಾನು ಇಷ್ಟು ಖುಷಿ ಆಗಿದ್ದನ್ನು ಕಂಡು ಜಯಂತ್ ಆಶ್ಚರ್ಯ ವ್ಯಕ್ತಪಡಿಸುತ್ತಾನೆ. ಮರುದಿನ ಜಾನು, ಜಯಂತ್ ಎದ್ದೇಳುವ ಮುನ್ನವೇ ಚೆಲ್ವಿ ಎದ್ದು ಅಡುಗೆ ಮನೆಗೆ ಹೋಗಿ ತಿಂಡಿ ಮಾಡುತ್ತಾಳೆ. ಜಯಂತ್ ಎದ್ದು ಅಡುಗೆ ಮನೆಗೆ ಬಂದು ಚೆಲ್ವಿಯನ್ನು ನೋಡುತ್ತಿದ್ದಂತೆ ಕೋಪಗೊಳ್ಳುತ್ತಾನೆ. ಅಡುಗೆ ಮನೆಯಲ್ಲಿ ಎಲ್ಲೆಂದಲ್ಲಿ ಬಿಸಾಡಿದ ವಸ್ತುಗಳು, ತರಕಾರಿ ಸಿಪ್ಪೆಗಳು, ಸಿಂಕ್‌ನಲ್ಲಿ ಹಾಗೇ ಇಟ್ಟ ಪಾತ್ರೆಗಳನ್ನು ನೋಡಿ ಅಸಹ್ಯ ಪಡುತ್ತಾನೆ.