Latest Kannada Nation & World
ಕೆಎಲ್ ರಾಹುಲ್ಗೆ ಬೆರಳಿಗೆ ಗಾಯ, ಆತಂಕದಲ್ಲಿ ಭಾರತ ತಂಡ; ಕನ್ನಡಿಗನ ಸ್ಥಾನ ತುಂಬಬಲ್ಲ ಮೂವರು ಆಟಗಾರರು ಇವರೇ
ರಾಹುಲ್ ಸ್ಥಾನ ತುಂಬಬಲ್ಲ ಮೂವರು ಆಟಗಾರರು
ಒಂದು ವೇಳೆ ಕೆಎಲ್ ರಾಹುಲ್ ಇಂಜುರಿಯಾಗಿ ಸರಣಿಯಿಂದ ಹೊರಬಿದ್ದರೆ, ಅವರ ಸ್ಥಾನ ತುಂಬಲು ಪೈಪೋಟಿ ನಡೆಸುತ್ತಿದ್ದಾರೆ. ಮಧ್ಯಮ ಕ್ರಮಾಂಕದಿಂದ ರೋಹಿತ್ ಸ್ಥಾನಕ್ಕೆ ಮರಳಿದರೆ, ರಾಹುಲ್ ಸ್ಥಾನವನ್ನು ಧ್ರುವ್ ಜುರೆಲ್ ತುಂಬಬಹುದು. ಈ ಹಿಂದೆ ಅವರ ಸ್ಥಾನ ನಿಭಾಯಿಸಿ ಸಂಪೂರ್ಣ ಯಶಸ್ಸು ಕಂಡಿದ್ದಾರೆ. ಮತ್ತೊಬ್ಬ ಆಟಗಾರ ಸರ್ಫರಾಜ್ ಖಾನ್ ತವರಿನಲ್ಲಿ ಟೀಮ್ ಇಂಡಿಯಾ ಪರ ಕೊನೆಯದಾಗಿ ಆಡಿದ್ದರು. ಇದೀಗ ಮತ್ತೆ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಎಲ್ಲಾ ಆಸ್ಟ್ರೇಲಿಯನ್ ಪಿಚ್ಗಳಲ್ಲಿ ಎಂಸಿಜಿ ಮತ್ತು ಎಸ್ಸಿಜಿ ಅವರ ಬ್ಯಾಟಿಂಗ್ ಶೈಲಿಗೆ ಹೊಂದುತ್ತದೆ. ಭಾರತದ ಪರ ಆಕ್ರಮಣಕಾರಿ ಆಟವನ್ನು ಅವರು ಆಡಲಿದ್ದಾರೆ. ಅಭಿಮನ್ಯು ಈಶ್ವರನ್ ಸಹ ರಾಹುಲ್ ಸ್ಥಾನ ತುಂಬಲು ಸಮರ್ಥರಿದ್ದಾರೆ. ಆ ಮೂಲಕ ಚೊಚ್ಚಲ ಅವಕಾಶಕ್ಕೆ ಕಾತರದಿಂದ ಕಾಯುತ್ತಿದ್ದಾರೆ. ಅಭಿಮನ್ಯು ಈಗಾಗಲೇ ಅದ್ಭುತ ಪ್ರದರ್ಶನ ಮೂಲಕ ಗಮನ ಸೆಳೆದಿದ್ದಾರೆ. ಆದರೆ ಯಾರಿಗೆ ಅವಕಾಶ ಸಿಗುತ್ತದೆ ಎಂಬುದು ಕುತೂಹಲ ಮೂಡಿಸಿದೆ.