Astrology
ಜನವರಿಯಿಂದ ಡಿಸೆಂಬರ್ವರೆಗೆ ಅಮಾವಾಸ್ಯೆ ಯಾವಾಗ; ಇಲ್ಲಿದೆ ಮಾಹಿತಿ
ಹಿಂದೂ ಸಂಸ್ಕೃತಿಯಲ್ಲಿ ಪೂಜೆ, ವ್ರತಾಚರಣೆಗಳಂತಹ ಧಾರ್ಮಿಕ ಕಾರ್ಯಕ್ರಮಗಳಿಗೆ ಹೆಚ್ಚು ಪ್ರಾಮುಖ್ಯ ನೀಡಲಾಗುತ್ತದೆ. ಹಿಂದೂ ಪಂಚಾಂಗದ ಪ್ರತಿ ಮಾಸದಲ್ಲೂ ಬರುವ ಸಂಕಷ್ಟಿ, ಏಕಾದಶಿ, ಅಮಾವಾಸ್ಯೆ ಮುಂತಾದವುಗಳನ್ನು ಭಕ್ತರು ಬಹಳ ಭಕ್ತಿಯಿಂದ ಆಚರಿಸುತ್ತಾರೆ. ಹಿಂದೂ ಧರ್ಮದಲ್ಲಿ ಅಮಾವಾಸ್ಯೆಗೆ ಹೆಚ್ಚಿನ ಪ್ರಾಮುಖ್ಯತೆಯಿದೆ. ಇದು ಪಿತೃಗಳಿಗೆ ಸಂಬಂಧಿಸಿದ ಆಚರಣೆ ಎಂಬ ನಂಬಿಕೆಯಿದೆ. ಕೃಷ್ಣ ಪಕ್ಷದ ಕೊನೆಯ ದಿನವಾದ ಅಮಾವಾಸ್ಯೆಯಂದು ಚಂದ್ರನು ಆಕಾಶದಲ್ಲಿ ಅದೃಶ್ಯವಾಗುವ ದಿನ ಇದಾಗಿದೆ.