Latest Kannada Nation & World
ಐಡೆಂಟಿಟಿ ಸಿನಿಮಾದ ಟ್ರೇಲರ್ ಬಿಡುಗಡೆ; ಟೊವಿನೋ ಥಾಮಸ್, ತ್ರಿಶಾ ನಟನೆಯ ಮಲಯಾಳಂ ಸಿನಿಮಾ ನೋಡಲು ಸಿದ್ಧರಾಗಿ

ಐಡೆಂಟಿಟಿ ಸಿನಿಮಾದ ತಾರಾಗಣ
ಮಲಯಾಳಂ ಸಿನಿಮಾ ಐಡೆಂಟಿಟಿಯಲ್ಲಿ ತ್ರಿಶಾ ಕೃಷ್ಣನ್ ಮತ್ತು ಟೊವಿನೋ ಥಾಮಸ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವಿನಯ್ ರೈ, ಮಂದಿರಾ ಬೇಡಿ, ಶಮ್ಮಿ ತಿಲಕನ್, ಅಜು ವರ್ಗೀಸ್, ಅರ್ಜುನ್ ರಾಧಾಕೃಷ್ಣನ್, ಅರ್ಚನಾ ಕವಿ, ಗೋಪಿಕಾ ರಮೇಶ್, ಅನೀಶ್ ಗೋಪಾಲ್, ಗಿಜು ಜಾನ್ ಮತ್ತು ಧ್ರುವನ್ ಸೇರಿದಂತೆ ಸಾಕಷ್ಟು ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಛಾಯಾಗ್ರಾಹಕ ಅಖಿಲ್ ಜಾರ್ಜ್, ಸಂಕಲನಕಾರ ಚಮನ್ ಚಕ್ಕೋ ಮತ್ತು ಸಂಗೀತ ನಿರ್ದೇಶಕ ಜೇಕ್ಸ್ ಬಿಜಾಯ್ ಕೂಡ ಈ ಚಿತ್ರದ ತಾಂತ್ರಿಕ ವಿಭಾಗದಲ್ಲಿದ್ದಾರೆ. ಯಾನಿಕ್ ಬೆನ್ ಅವರ ಸಾಹಸ, ಫೀನಿಕ್ಸ್ ಪ್ರಬು ಅವರ ನೃತ್ಯ ಸಂಯೋಜನೆಯೂ ಇದೆ. ಇವರಿಬ್ಬರೂ ತಮಿಳು ಸಿನಿಮಾ ಮಾವೀರನ್‌ಗೆ ಕೆಲಸ ಮಾಡಿದ್ದಾರೆ. ರಾಗಂ ಮೂವೀಸ್ ಮತ್ತು ಕಾನ್ಫಿಡೆಂಟ್ ಗ್ರೂಪ್‌ನ ಬ್ಯಾನರ್‌ಗಳ ಅಡಿಯಲ್ಲಿ ರಾಜು ಮಲ್ಲಿಯತ್ ಮತ್ತು ಡಾ ರಾಯ್ ಸಿಜೆ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.