Latest Kannada Nation & World
ಅಮ್ಮ ನೋಡದ ಮೊದಲ ಸಿನಿಮಾ ಇದು; ಇಟ್ ಹರ್ಟ್ಸ್ ಎಂದು ಭಾವುಕ ಪೋಸ್ಟ್ ಹಂಚಿಕೊಂಡ ಕಿಚ್ಚ ಸುದೀಪ್
ಸುದೀಪ್ ಅಭಿನಯದ ಮ್ಯಾಕ್ಸ್ ಸಿನಿಮಾ ಈಗಾಗಲೇ ಕರ್ನಾಟಕದಲ್ಲಿ ಬಿಡುಗಡೆಯಾಗಿದ್ದು ಅಭಿಮಾನಿಗಳು ಫಸ್ಟ್ ಡೇ, ಫಸ್ಟ್ ಶೋ ನೋಡಲು ಮುಗಿಬಿದ್ದಿದ್ದಾರೆ. ಕಿಚ್ಚ ಸುದೀಪ್ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ವರ್ಷಗಳ ನಂತರ ಸುದೀಪ್ ಅವರ ಸಿನಿಮಾ ತೆರೆಗೆ ಬಂದಿದೆ ಆದರೆ ನಟ ಕಿಚ್ಚ ಸುದೀಪ್ ಇನ್ನೂ ಅಮ್ಮನ ಅಗಲಿಕೆಯ ನೋವಿಂದ ಆಚೆ ಬಂದಿಲ್ಲ ಎಂಬುದು ಅವರ ಈ ಪೋಸ್ಟ್ ನೋಡದರೆ ಅರ್ಥವಾಗುತ್ತದೆ. ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಸಂಜೀವ್, ವಯಸ್ಸಹಜ ಅನಾರೋಗ್ಯದಿಂದ ಅಕ್ಟೋಬರ್ 20ರ ಭಾನುವಾರ ನಿಧನರಾಗಿದ್ದಾರೆ.