Latest Kannada Nation & World
ಒಟಿಟಿಯಲ್ಲಿ ಡಿಸ್ಪ್ಯಾಚ್ ಚಿತ್ರಕ್ಕೆ ಮನಸೋತ ವೀಕ್ಷಕರು; 200 ಮಿಲಿಯನ್ ವೀಕ್ಷಣೆ ಕಂಡ ಮನೋಜ್ ಬಾಜಪೇಯಿ ಸಿನಿಮಾ
ಬಾಲಿವುಡ್ ನಟ ಮನೋಜ್ ಬಾಜಪೇಯಿ, ಸಿನಿಮಾ ಮಾತ್ರವಲ್ಲದೆ, ಒಟಿಟಿ ವೀಕ್ಷಕರಿಗೂ ಇಷ್ಟದ ನಟ. ಈಗಾಗಲೇ ಇವರ ಫ್ಯಾಮಿಲಿ ಮ್ಯಾನ್ ವೆಬ್‌ಸಿರೀಸ್ ಸಾಕಷ್ಟು ಜನಪ್ರಿಯ ಗಳಿಸಿದ ಸಿರೀಸ್ ಎನಿಸಿಕೊಂಡಿವೆ. ಅದಾದ ಬಳಿಕ ಎಷ್ಟೋ ಸಿನಿಮಾಗಳು ನೇರವಾಗಿ ಒಟಿಟಿಗೂ ಆಗಮಿಸಿದ್ದವು. ಅದರಂತೆ, ಇದೇ ತಿಂಗಳ 13ರಂದು ಜೀ5 ಒಟಿಟಿಯಲ್ಲಿ ಬಿಡುಗಡೆ ಆಗಿತ್ತು. ಈಗ ಇದೇ ಸಿನಿಮಾ ವೀಕ್ಷಣೆ ವಿಚಾರದಲ್ಲೂ ಮುಂದಡಿ ಇರಿಸಿದೆ.