Latest Kannada Nation & World
ಸಂಸತ್ ಭವನದ ಎದುರೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ, ಯಾರೀತ, ಏನು ಕಳವಳಕಾರಿ ವಿಷಯ
“ಸ್ಥಳೀಯ ಪೊಲೀಸರು, ರೈಲ್ವೇ ಪೊಲೀಸರು ಮತ್ತು ಕೆಲವು ನಾಗರಿಕರು ತ್ವರಿತವಾಗಿ ಸ್ಪಂದಿಸಿದ ಕಾರಣ, ಆತ ಹಚ್ಚಿಕೊಂಡಿದ್ದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಲು ಸಾಧ್ಯವಾಯಿತು. ಕೂಡಲೇ ಆ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುವುದು ಕೂಡ ಸಾಧ್ಯವಾಯಿತು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರಿಗೆ, ಪ್ರಾಥಮಿಕ ತನಿಖೆ ವೇಳೆ ಈ ಕೃತ್ಯಕ್ಕೆ ವೈಯಕ್ತಿಕ ಕಾರಣ ಇರಬಹುದು. ಬಾಗಪತ್ನಲ್ಲಿ ಈ ವ್ಯಕ್ತಿ ವಿರುದ್ಧ ಕೇಸ್ ಇದ್ದು, ಅದರ ವಿವರ ಪಡೆಯಲು ಪೊಲೀಸರು ಪ್ರಯತ್ನಿಸಿದ್ದಾರೆ. ಅದರ ವಿವರ ಬಂದ ಬಳಿಕ ಆತ ಆ ವಿಪರೀತ ಕೃತ್ಯಕ್ಕೆ ಮುಂದಾಗಿದ್ದೇಕೆ ಎಂಬ ವಿವರ ಸಿಗಬಹುದು ಎಂದು ಪೊಲೀಸರು ತಿಳಿಸಿದ್ದಾಗಿ ಪಿಟಿಐ ವರದಿ ತಿಳಿಸಿದೆ.