Latest Kannada Nation & World
ಮಂಕಾದ ಹಳಬರು, ಮಿಂಚಿದ ಹೊಸಬರು; ಇದು ಸ್ಯಾಂಡಲ್‌ವುಡ್ ನಿರ್ದೇಶಕರ ಸೋಲು ಗೆಲುವಿನ ಲೆಕ್ಕಾಚಾರ

ಮೊದಲ ಪ್ರಯತ್ನದಲ್ಲಿ ಗುರುತಿಸಿಕೊಂಡ ಹೊಸಬರು
ಈ ವರ್ಷ ತಮ್ಮ ಮೊದಲ ಪ್ರಯತ್ನದಿಂದಲೇ ಗುರುತಿಸಿಕೊಂಡ ಒಂದಿಷ್ಟು ಹೊಸ ನಿರ್ದೇಶಕರೆಂದರೆ ಅದು ಸಂದೀಪ್ ಸುಂಕದ್ (ಶಾಖಾಹಾರಿ), ಶ್ರೀನಿಧಿ ಬೆಂಗಳೂರು (ಬ್ಲಿಂಕ್), ಉತ್ಸವ್ ಗೋಣವಾರ (ಫೋಟೋ), ಜೈಶಂಕರ್ ಆರ್ಯರ್ (ಶಿವಮ್ಮ), ವೈಭವ್ ಮಹದೇವ್ (ಜೂನಿ), ಸೂರ್ಯ ವಸಿಷ್ಠ (ಸಾರಾಂಶ), ರಾಜ್‍ಗುರು (ಕೆರೆಬೇಟೆ), ಮಿಥಿಲೇಶ್ ಎಡವತ್ (ರೂಪಾಂತರ), ವಿಕಾಸ್ ಪುಷ್ಪಗಿರಿ (ಸ್ಕ್ಯಾಮ್ 1770), ಪ್ರತೀಕ್ ಪ್ರಜೋಶ್ (ಚಿಲ್ಲಿ ಚಿಕನ್), ಚಂದ್ರಜಿತ್ ಬೆಳ್ಳಿಯಪ್ಪ (ಇಬ್ಬನಿ ತಬ್ಬಿದ ಇಳೆಯಲಿ) ಮುಂತಾದವರು. ಇವರ ಚಿತ್ರಗಳು ದೊಡ್ಡ ಮಟ್ಟದಲ್ಲಿ ಗೆಲ್ಲದಿದ್ದರೂ, ಇವರೆಲ್ಲರೂ ಭರವಸೆ ಮೂಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಇವರು ಹೇಗೆ ಮುಂದುವರೆಯುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.