Latest Kannada Nation & World
ನಾರಾಯಣಾಚಾರ್ಯರ ಮನೆಗೆ ಬಂದ ಗುರುಗಳು; ಏನಿರಬಹುದು ಆಗಮನದ ಹಿಂದಿನ ಉದ್ದೇಶ?

ರಾಮಾಚಾರಿ ಧಾರಾವಾಹಿಯಲ್ಲಿ ಗುರುಗಳ ಆಗಮನವಾಗಿದೆ. ಅವರು ಬರುತ್ತಾರೆ ಎಂಬ ಮಾಹಿತಿ ಮೊದಲೇ ಇದ್ದ ಕಾರಣ ಎಲ್ಲರೂ ತಯಾರಿ ನಡೆಸಿಕೊಂಡಿದ್ದಾರೆ. ಮನೆಯನ್ನು ಸ್ವಚ್ಛಮಾಡಿ, ಊಟ, ಉಪಹಾರ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಆದರೆ ಗುರುಗಳು ಯಾವ ಕಾರಣಕ್ಕಾಗಿ ಬಂದಿದ್ದಾರೆ ಎಂಬುದು ತಿಳಿದಿಲ್ಲ. ನಾರಾಯಣಾಚಾರ್ಯರು ಮಾತ್ರ ತಮ್ಮ ಗುರುಗಳು ಮನೆಗೆ ಬರುತ್ತಿದ್ದಾರೆ ಎಂದು ತುಂಬಾ ಸಂತೋಷದಲ್ಲಿರುವಂತೆ ತೋರುತ್ತದೆ. “ನನ್ನಂತ ಪಾಮರನ ಮನೆಗೆ ನೀವು ಬಂದಿರುವುದು ತುಂಬಾ ಸಂತೋಷ ತಂದಿದೆ” ಎನ್ನುತ್ತಲೇ ನಾರಾಯಣಾಚಾರ್ಯ ಅವರ ಸೇವೆ ಮಾಡುತ್ತಾರೆ.