Latest Kannada Nation & World
ಸ್ವಲ್ಪ ಕಲರ್ ಇದ್ದೀನಿ ಅಂತ ಅದೇ ಪಾತ್ರಕ್ಕೆ ಫಿಕ್ಸ್ ಆಗಿಬಿಟ್ಟೆ; ‘ಪಿನಾಕ’ ಸಿನಿಮಾ ಟೀಸರ್ ಬಿಡುಗಡೆಯಲ್ಲಿ ಮುಂಗಾರು ಮಳೆ ನೆನದ ಗಣೇಶ್

ಗಣೇಶ್ ಅಭಿನಯದ ‘ಪಿನಾಕ’ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದೆ. ಇಷ್ಟು ವರ್ಷಗಳಲ್ಲಿ, ಯಾವ ಚಿತ್ರಗಳಲ್ಲೂ ನೋಡದ ಗಣೇಶ್ ಅವರ ಹೊಸ ಅವತಾರವನ್ನು ಈ ಸಿನಿಮಾದಲ್ಲಿ ನೋಡಬಹುದು. ಗಣೇಶ್ ಅವರ ಮಾತಿನಲ್ಲಿ ‘ಭೂತ, ಪ್ರೇತ, ಪಿಶಾಚಿಗಳ ಹಸಿವ ನೀಗಿಸೋ ಮಾರಣಹೋಮ, ಸೃಷ್ಟಿ-ಸಮಷ್ಠಿಯನ್ನು ನಡಗಿಸೋ ಘೋರ ಸಂಗ್ರಾಮ …’ ಎನ್ನುವಂತಹ ಸಂಭಾಷಣೆಗಳನ್ನು ಕೇಳಬಹುದು. ಈತ ರುದ್ರನೋ, ಕ್ಷುದ್ರನೋ? ಎಂಬ ಪ್ರಶ್ನೆ ಬರಬಹುದು. ಒಟ್ಟಾರೆ, ‘ಪಿನಾಕ’ದಲ್ಲಿ ಬೇರೆಯದೇ ತರಹ ನಟ ಗಣೇಶ್ ಕಾಣುತ್ತಾರೆ.