Latest Kannada Nation & World
ಎಮೋಜಿಗಳೊಂದಿಗೆ ತಾನು ಉಳಿಸಿಕೊಳ್ಳುವ ಆಟಗಾರರ ಸುಳಿವು ನೀಡಿದ ಸಿಎಸ್ಕೆ; ಆ ಐವರು ಯಾರು?

ಐಪಿಎಲ್ 2025 ಮೆಗಾ ಹರಾಜಿಗೆ ಮೊದಲು, ಪ್ರತಿ ಫ್ರಾಂಚೈಸಿ ಗರಿಷ್ಠ 6 ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ನೀಡಿದೆ. ಬಯಸಿದರೆ ಇಬ್ಬರು ಅನ್ಕ್ಯಾಪ್ಡ್ ಆಟಗಾರರನ್ನೂ ಉಳಿಸಿಕೊಳ್ಳಬಹುದು. ಅಲ್ಲದೆ, ನಾಲ್ಕು ಕ್ಯಾಪ್ಡ್, ಒಬ್ಬ ಅನ್ಕ್ಯಾಪ್ಡ್ ಆಟಗಾರನನ್ನು ಆಯ್ಕೆ ಮಾಡಬಹುದು. ಸಿಎಸ್ಕೆ ಕೂಡ ಇದೇ ರೀತಿಯ ಕಾರ್ಯತಂತ್ರದೊಂದಿಗೆ ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಸಿದ್ಧಪಡಿಸಿದೆ. ಅದನ್ನು ಎಮೋಜಿಗಳೊಂದಿಗೆ ಸುಳಿವು ನೀಡಿದೆ. ಸಿಎಸ್ಕೆ ಪೋಸ್ಟ್ನಲ್ಲಿ ಎಮೋಜಿಗಳನ್ನು ನೋಡಿದರೆ ನಿಮಗೆ ಏನಾದರೂ ಸುಳಿವು ಸಿಕ್ಕಿತಾ? ಈ ಪೋಸ್ಟ್ ಇಲ್ಲಿದೆ ನೋಡಿ.