Latest Kannada Nation & World
ವರಳನ್ನು ಎತ್ತಾಕ್ಕೊಂಡ್ ಹೋಗಿ ಎಂದು ವರದನಿಗೆ ಐಡಿಯಾ ಕೊಟ್ಟ ಶ್ರಾವಣಿ, ಯಜಮಾನರ ಪ್ರಾಣಕ್ಕೆ ಕಾವಲಾದ ಸುಬ್ಬು; ಶ್ರಾವಣಿ ಸುಬ್ರಹ್ಮಣ್ಯ

ವರಳನ್ನು ಎತ್ತಾಕೊಂಡ್ ಹೋಗಿ ಎಂದು ವರದನಿಗೆ ಹೇಳಿದ ಶ್ರಾವಣಿ
ಶ್ರಾವಣಿಗೆ ಕರೆ ಮಾಡುವ ವರದ ತನ್ನ ತಾಯಿ ಮದುವೆಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿರುವುದಾಗಿ ಹೇಳುತ್ತಾನೆ. ಅದಕ್ಕೆ ಶ್ರಾವಣಿ ನೀವೇನೂ ತಲೆ ಕೆಡಿಸಿಕೊಳ್ಳಬೇಡಿ, ನಾನು ರಿಜಿಸ್ಟರ್ ಆಫೀಸ್‌ನಲ್ಲಿ ಎಲ್ಲಾ ಕೆಲಸ ಮುಗಿಸಿದ್ದೇನೆ, ಇನ್ನು ವರಳನ್ನು ಕರೆದುಕೊಂಡು ಹೋಗುವುದು ಮಾತ್ರ ಬಾಕಿ ಎಂದು ಹೇಳುತ್ತಾಳೆ. ಆಗ ವರಲಕ್ಷ್ಮೀ ಜೊತೆ ಯಾರು ಮಾತನಾಡುವುದು ಎಂದು ಯೋಚಿಸುತ್ತಾರೆ ವರದ–ಶ್ರಾವಣಿ. ಶ್ರಾವಣಿ ಆಕೆ ತಾನು ಮಾತನಾಡಿದ್ರೆ ಜಗಳಕ್ಕೆ ಬರುತ್ತಾಳೆ ಅಂತ ಹೇಳಿದ್ರೆ, ವರದ ಅವಳು ತನ್ನ ನಂಬರ್ ಬ್ಲಾಕ್ ಮಾಡಿದ್ದಾಗಿ ಹೇಳುತ್ತಾನೆ. ಆಗ ಶ್ರಾವಣಿ ಈಗ ಬೇರೆ ದಾರಿಯೇ ಇಲ್ಲ. ನಾನು ಅವಳನ್ನು ಹೇಗಾದರೂ ಮನೆಯಿಂದ ಆಚೆ ಕಳಿಸ್ತೀನಿ. ನೀವು ಒಂದು ಕಾರ್ ಇಟ್ಕೊಂಡು ರೆಡಿ ಆಗಿರಿ. ಅವಳನ್ನು ಕಿಡ್ನಾಪ್ ಮಾಡದೇ ಬೇರೆ ದಾರಿ ಇಲ್ಲ ಎಂದು ಐಡಿಯಾ ಕೊಡುತ್ತಾಳೆ.