Latest Kannada Nation & World
ʻಎಲ್ಲಾ ಮುಸ್ಲಿಮರನ್ನು ನಾವು ಕೆಟ್ಟವರು ಅಂತ ಹೇಳೋಕೆ ಆಗಲ್ಲʼ ಪಹಲ್ಗಾಮ್ ಉಗ್ರ ದಾಳಿ ಬಗ್ಗೆ ನಟಿ ರಮ್ಯಾ ಪ್ರತಿಕ್ರಿಯೆ

ಸಹಾಯ ಮಾಡಿದ್ದೂ ಮುಸ್ಲಿಮರೇ!
ಶೂಟ್ ಮಾಡುವಾಗ ನೀವು ಮುಸ್ಲಿಮರಾ ಎಂದು ಕೇಳಿ, ಕುರಾನ್ ಓದಲು ಬಾರದವರನ್ನು ಶೂಟ್ ಮಾಡಲಾಗಿದೆ. ಈ ಬಗ್ಗೆ ಏನು ಹೇಳ್ತಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ರಮ್ಯಾ, “ನೀವು ಹಾಗೆ ನೋಡೋಕೆ ಹೋದರೆ, ಈ ದಾಳಿ ಬಳಿಕ ಅಲ್ಲಿನ ಎಲ್ಲರಿಗೂ ಸಹಾಯ ಮಾಡಿರುವುದು ಅಲ್ಲಿನ ಮುಸ್ಲಿಮರೇ. ನಾವು ಎಲ್ಲಾ ಮುಸ್ಲಿಮರನ್ನ ಕೆಟ್ಟವರು ಅಂತ ಹೇಳೋಕೆ ಆಗಲ್ಲ. ನಾನು ಅದಕ್ಕೆ ಹೇಳಿದ್ದು ಟೆರರಿಸಂಗೆ ಯಾವ ಧರ್ಮನೂ ಬರಲ್ಲ, ಮನುಷ್ಯತ್ವನೂ ಬರಲ್ಲ ಅಂತ. ಎಲ್ಲರನ್ನೂ ಒಂದೇ ದೃಷ್ಟಿಯಲ್ಲಿ ನೋಡೋಕೆ ಆಗಲ್ಲ. ಉಗ್ರವಾದ ಮತ್ತು ಟೆರರಿಸಂ ಅನ್ನು ನಾವು ಖಂಡಿಸಲೇಬೇಕು’’ ಎಂದಿದ್ದಾರೆ.