Latest Kannada Nation & World
ಬಂಧನವಾದಷ್ಟೇ ಬೇಗ ಮಧ್ಯಂತರ ಜಾಮೀನು ಪಡೆದು ಹೊರಬಂದ ಪುಷ್ಪ 2 ನಟ ಅಲ್ಲು ಅರ್ಜುನ್

ಪುಷ್ಪ 2 ಸಿನಿಮಾದಲ್ಲಿ ಪುಷ್ಪರಾಜನನ್ನು ಬಂಧಿಸಲು ಇಡೀ ಪೊಲೀಸ್ ಇಲಾಖೆ ಹರಸಾಹಸ ಪಟ್ಟಿತ್ತು. ಖಾಕಿ ಪಡೆಗೇ ಪುಷ್ಪರಾಜ್ ಮತ್ತವರ ಗ್ಯಾಂಗ್ ಚಳ್ಳೆಹಣ್ಣು ತಿನ್ನಿಸಿತ್ತು. ಇದೀಗ ನಿಜ ಜೀವನದಲ್ಲಿಯೇ ಪೊಲೀಸರ ಅತಿಥಿಯಾಗಿದ್ದಾರೆ ಅಲ್ಲು ಅರ್ಜುನ್. ಪುಷ್ಪ 2 ಸಿನಿಮಾ ವೀಕ್ಷಣೆ ವೇಳೆ ಕಾಲ್ತುಳಿತದಲ್ಲಿ ಓರ್ವ ಮಹಿಳೆ ಸಾವನ್ನಪ್ಪುತ್ತಿದ್ದಂತೆ, ನಟನ ವಿರುದ್ಧ ದೂರು ದಾಖಲಾಗಿತ್ತು. ಅದರಂತೆ, ಇಂದು ಅವರ ಬಂಧನವಾಗಿದೆ. ಹೀಗೆ ಬಂಧನ ಆಗುತ್ತಿದ್ದಂತೆ, ಅಲ್ಲು ಅರ್ಜುನ್‌ಗೆ ರಿಯಲ್ ಪೊಲೀಸ್ ವರಸೆ ಹೇಗಿದೆ ಎಂದು ನೆಟ್ಟಿಗರು ಆಡಿಕೊಳ್ಳುತ್ತಿದ್ದಾರೆ.