Latest Kannada Nation & World
ಪ್ಯಾರಿಸ್ ಪ್ಯಾರಾಲಿಂಪಿಕ್ಸ್; ಭಾರತದ ಕ್ರೀಡಾಪಟುಗಳ ಈವೆಂಟ್ಸ್, ಸಮಯ ಹಾಗೂ ಸಂಪೂರ್ಣ ವೇಳಾಪಟ್ಟಿ

ಪ್ಯಾರಿಸ್‌ನಲ್ಲಿ ಪ್ಯಾರಾಲಿಂಪಿಕ್ಸ್ ಕಲರವ ಇಂದಿನಿಂದ (ಆಗಸ್ಟ್ 28) ಆರಂಭವಾಗುತ್ತಿದೆ. ಜಾಗತಿಕ ವೇದಿಕೆಯಲ್ಲಿ ಭಾರತೀಯ ಕ್ರೀಡಾಪಟುಗಳು ಮಿಂಚಲು ಸಜ್ಜಾಗಿದ್ದಾರೆ. ಈ ವರ್ಷ ಭಾರತದಿಂದ 12 ಕ್ರೀಡೆಗಳಲ್ಲಿ ಸ್ಪರ್ಧಿಸಲು 84 ಕ್ರೀಡಾಪಟುಗಳ ಪ್ರೇಮನಗರಿಗೆ ತೆರಳಿದ್ದಾರೆ. ಆಗಸ್ಟ್ 28ರಿಂದ ಸೆಪ್ಟೆಂಬರ್ 9ರವರೆಗೂ ಕ್ರೀಡಾಕೂಟ ನಡೆಯಲಿದೆ. ಕಳೆದ ಬಾರಿ ನಡೆದ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಗೆದ್ದ ಪದಕಗಳಿಗಿಂತ ಹೆಚ್ಚು ಪದಕಗಳ ಸಾಧನೆ ಮಾಡುವುದೇ ಭಾರತೀಯರ ಗುರಿ. ಸುಮಿತ್ ಆಂಟಿಲ್, ಅವನಿ ಲೆಖಾರಾ, ಮನೀಶ್ ನರ್ವಾಲ್ ಮತ್ತು ಕೃಷ್ಣ ನಗರ್ ಅವರಂಥ ಕ್ರೀಡಾಪಟುಗಳು ತಮ್ಮ ಪದಕಗಳನ್ನು ಉಳಿಸಿಕೊಂಡು ಮತ್ತೊಮ್ಮೆ ಬಂಗಾರದ ಸಾಧನೆ ಮಾಡುವ ಗುರಿ ಹೊಂದಿದ್ದಾರೆ.