Latest Kannada Nation & World
ಭಾವ ತೀರ ಯಾನ ಸಿನಿಮಾ ವಿಮರ್ಶೆ; ಹಳೇ ಪ್ರೀತಿಗೆ ಹೊಸ ಸ್ಪರ್ಷ

ಭಾವ ತೀರ ಯಾನ ಎಂದ ತಕ್ಷಣ ಮೊದಲು ನೆನಪಾಗುವುದು ಎ ಆರ್ ಮಣಿಕಾಂತ್ ಅವರ ಪುಸ್ತಕ. ಅವರೇ ನೀಡಿದ ಹೆಸರಿನಲ್ಲಿ ನಿರ್ಮಾಣವಾದ ಸಿನಿಮಾ ‘ಭಾವ ತೀರ ಯಾನ’ ಯೌವನದಿಂದ ಮುಪ್ಪಿನವರೆಗೆ ಪ್ರೀತಿ ಎಂಬುದು ಬದುಕಿನಲ್ಲಿ ಯಾವ ರೀತಿ ಉಸಿರಾಡುತ್ತದೆ ಎಂಬ ಸುಂದರ ಚಿತ್ರಣವನ್ನು ಈ ಸಿನಿಮಾದಲ್ಲಿ ನೀಡಿದ್ದಾರೆ. ಸಿನಿಮಾದ ಕಥೆ, ಸಂಭಾಷಣೆ, ಸಂಗೀತ ಎಲ್ಲವೂ ಒಂದೇ ಹದದಲ್ಲಿ ಬೆರೆಯುತ್ತಾ ವೀಕ್ಷಕರಿಗೆ ಕತೆಯುಣಿಸುತ್ತಾ ಸಾಗುತ್ತದೆ. ಬದುಕಿನ ಹಲವು ಮಜಲುಗಳಲ್ಲಿ ಅನುಭವಿಸುವ ನೋವು, ನಲಿವು, ಹತಾಷೆ, ಪ್ರೀತಿ ಎಲ್ಲವನ್ನೂ ಈ ಸಿನಿಮಾದಲ್ಲಿ ತೋರಿಸಿದ್ದಾರೆ. ರೋಮ್ಯಾಂಟಿಕ್ ಡ್ರಾಮಾ ಎಂದ ತಕ್ಷಣ ಮನಸಿಗೆ ಬರುವುದು ಒಂದು ಹುಡುಗ, ಹುಡುಗಿಯ ಚಿತ್ರಣ ಅಥವಾ ತ್ರಿಕೋನ ಪ್ರೇಮ. ಆದರೆ ಈ ಸಿನಿಮಾದಲ್ಲಿ ಆ ಎಲ್ಲ ಎಲ್ಲೆಗಳನ್ನು ನಿರ್ದೇಶಕರು ಮೀರಿದ್ದಾರೆ.