Latest Kannada Nation & World
ದೆಹಲಿ ಚುನಾವಣೆ ಎಕ್ಸಿಟ್ ಪೋಲ್‌ಗೆ ಕ್ಷಣಗಣನೆ, 2020 ಮತ್ತು 2015ರ ಮತದಾನೋತ್ತರ ಸಮೀಕ್ಷೆಗಳು ಎಷ್ಟು ನಿಜವಾಗಿದ್ದವು

Delhi Exit Poll: ದೆಹಲಿ ಚುನಾವಣೆಯ ಮತದಾನ ಇಂದು (ಫೆ 5) ನಡೆಯುತ್ತಿದ್ದು, ಸಂಜೆ 6 ಗಂಟೆ ಬಳಿಕ ಅನೇಕ ಸುದ್ದಿ ವಾಹಿನಿಗಳು, ಚುನಾವಣಾ ಸಮೀಕ್ಷಾ ಸಂಸ್ಥೆಗಳ ಎಕ್ಸಿಟ್ ಪೋಲ್ ವರದದಿಗಳು ಪ್ರಸಾರವಾಗಲಿವೆ. ದೆಹಲಿ ವಿಧಾನಸಭೆಯ 70 ಸ್ಥಾನಗಳ ಚುನಾವಣಾ ಫಲಿತಾಂಶ ಫೆ 8 ರಂದು ಮತ ಎಣಿಕೆ ಬಳಿಕ ಪ್ರಕಟವಾಗಲಿದೆ. ಹಿಂದಿನ ಎರಡು ಅವಧಿಗಳಲ್ಲಿ ನಡೆದ ಚುನಾವಣೆಗಳಲ್ಲಿ ಅಂದರೆ 2015 ಮತ್ತು 2020ರ ದೆಹಲಿ ಚುನಾವಣೆಗಳಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಾರ್ಟಿ (ಎಎಪಿ) ಸ್ಪಷ್ಟ ಬಹುಮತದೊಂದಿಗೆ ಗೆಲುವು ದಾಖಲಿಸಿತ್ತು. ಹಾಗಾದರೆ, ಆ ಎರಡೂ ಚುನಾವಣೆ ಸಂದರ್ಭದಲ್ಲಿ ಪ್ರಕಟವಾದ ಎಕ್ಸಿಟ್ ಪೋಲ್ ವರದಿಗಳು ಎಷ್ಟು ನಿಖರವಾಗಿದ್ದವು ಗಮನಿಸೋಣ.