Latest Kannada Nation & World
ವಿಶಾಲ್ ಮೆಗಾ ಮಾರ್ಟ್ ಆರಂಭಿಕ ಷೇರು ವಿತರಣೆ, ಈ ಐಪಿಒಗೆ ಬಿಡ್ ಮಾಡಬಹುದೇ, ಜಿಎಂಪಿ ಎಷ್ಟಿದೆ? ಇಲ್ಲಿದೆ ವಿವರ

Vishal Mega Mart IPO: ವಿಶಾಲ್ ಮೆಗಾ ಮಾರ್ಟ್ ಐಪಿಒ ಇದೇ ಡಿಸೆಂಬರ್ 11ರಿಂದ ಬಿಡ್ಗೆ ಮುಕ್ತವಾಗಲಿದೆ. 8,000.00 ಕೋಟಿ ರೂಪಾಯಿಯ, 102.56 ಕೋಟಿ ಷೇರುಗಳ ಮಾರಾಟದ ಆಫರ್ ಫಾರ್ ಸೇಲ್ (ಒಎಫ್ಎಸ್) ಐಪಿಒ ಇದಾಗಿದೆ. ವಿಶಾಲ್ ಮೆಗಾ ಮಾರ್ಟ್ ಐಪಿಒಗೆ ಡಿಸೆಂಬರ್ 11ರಿಂದ ಡಿಸೆಂಬರ್ 13ರವರೆಗೆ ಬಿಡ್ ಸಲ್ಲಿಸಲು ಅವಕಾಶವಿದೆ. ಈ ಐಪಿಒ ಬಿಎಸ್ಇ, ಎನ್ಎಸ್ಇಯಲ್ಲಿ ಡಿಸೆಂಬರ್ 18ರಂದು ಲಿಸ್ಟ್ ಆಗುವ ಸೂಚನೆಯಿದೆ. ವಿಶಾಲ್ ಮೆಗಾ ಮಾರ್ಟ್ ಐಪಿಒ ಬೆಲೆ ಬ್ಯಾಂಡ್ ಪ್ರತಿ ಷೇರಿಗೆ 74 ರೂಪಾಯಿಯಿಂದ 78 ರೂಪಾಯಿ ಎಂದು ನಿಗದಿಪಡಿಸಲಾಗಿದೆ. ಅಪ್ಲಿಕೇಶನ್ಗೆ ಕನಿಷ್ಠ ಲಾಟ್ ಗಾತ್ರವು 190 ಷೇರುಗಳಾಗಿವೆ. ಒಂದು ಲಾಟ್ಗೆ ಅಪ್ಲೈ ಮಾಡಲು 14,820 ರೂಪಾಯಿ ಬೇಕಿರುತ್ತದೆ. ಎಸ್ಎನ್ಐಐ ಕನಿಷ್ಠ ಲಾಟ್ ಗಾತ್ರ 14 (2,660 ಷೇರುಗಳು). ಇಷ್ಟು ಲಾಟ್ ಖರೀದಿಸಲು 207,480 ರೂಪಾಯಿ ಬೇಕಿರುತ್ತದೆ. ಬಿಎನ್ಐಐ ಬಿಡ್ದಾರರು 68 ಲಾಟ್ (12,920 ಷೇರುಗಳು) ಖರೀದಿಸಬೇಕು. ಇದರ ದರ 1,007,760 ರೂಪಾಯಿ ಆಗಿದೆ.