Latest Kannada Nation & World
ಕೇಂದ್ರ ಬಜೆಟ್ ಅಧಿವೇಶನ ಜನವರಿ 31ಕ್ಕೆ ಶುರು; ಸಂಸತ್ ಅಧಿವೇಶನದ ಪ್ರಮುಖ ದಿನಾಂಕ ಮತ್ತು ಇತರೆ ವಿವರ ಹೀಗಿದೆ

18ನೇ ಲೋಕಸಭೆಯ ನಾಲ್ಕನೇ ಅಧಿವೇಶನ; ಕೇಂದ್ರ ಬಜೆಟ್ 2025ರ ಪ್ರಮುಖ ದಿನಾಂಕಗಳು
ಹದಿನೆಂಟನೇ ಲೋಕಸಭೆಯ ನಾಲ್ಕನೇ ಅಧಿವೇಶನಕ್ಕೆ ದಿನಗಣನೆ ಶುರುವಾಗಿದೆ. ಲೋಕಸಭೆ ಸದಸ್ಯರಿಗೆ ಸಚಿವಾಲಯ ನೀಡಿದ ಮಾಹಿತಿ ಪ್ರಕಾರ, ಕೇಂದ್ರ ಬಜೆಟ್ 2025ರ ಅಧಿವೇಶನವು ಜನವರಿ 31ರಂದು ಶುರುವಾಗಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಆ ಮೂಲಕ ಬಜೆಟ್ ಅಧಿವೇಶನಕ್ಕೆ ಚಾಲನೆ ನೀಡಲಿದ್ದಾರೆ. ಜನವರಿ 31ರ ಬೆಳಗ್ಗೆ 11 ಗಂಟೆಗೆ ಅಧಿವೇಶನ ಶುರುವಾಗಲಿದೆ. ಅರ್ಧ ಗಂಟೆಯಲ್ಲಿ ರಾಷ್ಟ್ರಪತಿ ಭಾಷಣ ಪೂರ್ಣಗೊಂಡ ಬಳಿಕ, ಕಲಾಪಗಳು ನಡೆಯಲಿವೆ. ಲೋಕಸಭೆ ಮತ್ತು ರಾಜ್ಯಸಭೆ ಕಲಾಪಗಳು ಜನವರಿ 31 ರಿಂದ ಏಪ್ರಿಲ್ 4 ರ ತನಕ ರಜಾದಿನಗಳನ್ನು ಹೊರತುಪಡಿಸಿ ಬೆಳಗ್ಗೆ 11 ಗಂಟೆಯಿಂದ ಅಪರಾಹ್ನ 1 ಗಂಟೆ ತನಕ, ಅಪರಾಹ್ನ 2 ಗಂಟೆಯಿಂದ ಸಂಜೆ 6 ಗಂಟೆ ತನಕ ನಡೆಯಲಿದೆ.